Site icon Vistara News

RBI Monetary Policy: ಇಂದು ಆರ್‌ಬಿಐ ಮಹತ್ವದ ಸಭೆ; ಸಾಲದ ಮೇಲಿನ ಬಡ್ಡಿ ಏರಿಕೆ ಆಗುವುದೇ? ನಿರೀಕ್ಷೆ ಏನು?

reserve bank of india office

RBI Monetary Policy Meeting Today; decision likely to maintain status quo, feel experts

ನವದೆಹಲಿ: ಭಾರತೀಯ ರಿಸರ್ವ್‌ ಬ್ಯಾಂಕ್‌ (RBI) ಗುರುವಾರ (ಆಗಸ್ಟ್‌ 10) ಮೂರನೇ ದ್ವೈಮಾಸಿಕ ಹಣಕಾಸು ಪರಾಮರ್ಶೆ ಸಭೆ (RBI Monetary Policy) ನಡೆಯಲಿದ್ದು, ರೆಪೋ ದರ ಸೇರಿ ಪ್ರಮುಖ ಬಡ್ಡಿದರಗಳ ಏರಿಕೆ ಅಥವಾ ಯಥಾಸ್ಥಿತಿ ಕಾಪಾಡುವ ಕುರಿತು ಪ್ರಮುಖ ಘೋಷಣೆ ಮಾಡಲಿದೆ. ಹಾಗಾಗಿ, ಎಲ್ಲರ ಗಮನ ಈಗ ಆರ್‌ಬಿಐ ಸಭೆಯ ಘೋಷಣೆಗಳತ್ತ ಇದೆ.

ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಶೀಘ್ರದಲ್ಲೇ ಘೋಷಣೆ ಮಾಡಲಾಗುತ್ತದೆ. ದೇಶದಲ್ಲಿ ಈಗಾಗಲೇ ಹಣದುಬ್ಬರ ಪ್ರಮಾಣವು ಶೇ.5ಕ್ಕಿಂತ ಕಡಿಮೆ ಇದೆ. ಟೊಮ್ಯಾಟೊ ಸೇರಿ ಹಲವು ತರಕಾರಿ, ಬೇಳೆ-ಕಾಳುಗಳ ಬೆಲೆ ಮಾತ್ರ ಹೆಚ್ಚಾಗಿದೆ. ಹಾಗಾಗಿ, ಈ ಬಾರಿಯೂ ಬಡ್ಡಿದರಗಳಲ್ಲಿ ಯಾವುದೇ ಬದಲಾವಣೆ ಮಾಡುವ ನಿರೀಕ್ಷೆ ಇಲ್ಲ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಯಥಾಸ್ಥಿತಿ ಮುಂದುವರಿಸಿದರೆ ಗೃಹ ಸಾಲ ಸೇರಿ ಯಾವುದೇ ಬಡ್ಡಿ ದರ ಏರಿಕೆಯಾಗುವುದಿಲ್ಲ.

25 ಮೂಲಾಂಕ ಹೆಚ್ಚಿಸಿದರೂ ಅಚ್ಚರಿ ಇಲ್ಲ

ದೇಶದ ಜಿಡಿಪಿ ಬೆಳವಣಿಗೆಯು ಆಶಾದಾಯಕವಾಗಿದ್ದರೂ ತರಕಾರಿ ಬೆಲೆಯೇರಿಕೆಯು ಆರ್‌ಬಿಐ ನೀತಿ ನಿರೂಪಕರಿಗೆ ತಲೆನೋವಾಗಿ ಪರಿಣಮಿಸಿದೆ. ಹಾಗಾಗಿ, ಹಣದುಬ್ಬರ ನಿಯಂತ್ರಣದ ದೃಷ್ಟಿಯಿಂದ ರೆಪೋ ದರದಲ್ಲಿ 25 ಬೇಸಿಸ್‌ ಪಾಯಿಂಟ್‌ಗಳನ್ನು ಹೆಚ್ಚಿಸಿದರೂ ಅಚ್ಚರಿ ಇಲ್ಲ ಎಂದು ಹೇಳಲಾಗುತ್ತದೆ.

ದೇಶದ ಹಣದುಬ್ಬರವನ್ನು ನಿಯಂತ್ರಣದಲ್ಲಿಡಲು 2022 ಮೇ ತಿಂಗಳಿಂದ ನಿರಂತರವಾಗಿ ಒಟ್ಟು 250 ಬೇಸಿಸ್ ಪಾಯಿಂಟ್‌ಗಳನ್ನು ಆರ್‌ಬಿಐ ಹೆಚ್ಚಿಸುತ್ತಾ ಬಂದಿತ್ತು. ಏಪ್ರಿಲ್‌ನಲ್ಲಿ ಆರ್‌ಬಿಐನ ಹಣಕಾಸು ಸ್ಥಾಯಿ ಸಮಿತಿಯು ರೆಪೊ ದರವನ್ನು 6.50 ಪ್ರತಿಶತದಲ್ಲಿ ಯಾವುದೇ ಬದಲಾವಣೆ ಮಾಡದಿರಲು ನಿರ್ಧರಿಸಿತು. ಜೂನ್‌ನಲ್ಲೂ ಬಡ್ಡಿ ದರಗಳನ್ನು ಯಥಾಸ್ಥಿತಿ ಮುಂದುವರಿಸಿತ್ತು.

ಇದನ್ನೂ ಓದಿ: Currency Notes : ಈ ಮಾರ್ಕ್‌ ಇರುವ ಕರೆನ್ಸಿ ನೋಟುಗಳು ನಕಲಿ ಅಲ್ಲ: ಆರ್‌ಬಿಐ

ಭಾರತದ ಜಿಡಿಪಿ ಬೆಳವಣಿಗೆಯು ಮೊದಲನೇ ತ್ರೈಮಾಸಿಕದಲ್ಲಿ ಶೇ.8, ಎರಡನೇ ತ್ರೈಮಾಸಿಕದಲ್ಲಿ ಶೇ.6.5, ಮೂರನೇ ತ್ರೈಮಾಸಿಕದಲ್ಲಿ ಶೇ.6 ಮತ್ತು ನಾಲ್ಕನೇ ತ್ರೈಮಾಸಿಕದಲ್ಲಿ ಶೇ. 5.7 ಇರಲಿದೆ ಎಂದು ನಿರೀಕ್ಷಿಸಲಾಗಿದೆ ಎಂದು ಶಕ್ತಿಕಾಂತ ದಾಸ್ ಈಗಾಗಲೇ ತಿಳಿಸಿದ್ದಾರೆ. 2023-24ನೇ ಹಣಕಾಸು ಸಾಲಿಗೆ ಭಾರತೀಯ ರಿಸರ್ವ್ ಬ್ಯಾಂಕ್, ದೇಶದ ಜಿಡಿಪಿ ಬೆಳವಣಿಗೆಯನ್ನು ಶೇ.6.5ಕ್ಕೆ ನಿಗದಿಪಡಿಸಿದೆ.

Exit mobile version