ನವ ದೆಹಲಿ: ಸಾರ್ವಜನಿಕ ವಲಯದ ಮಾಲಿಕತ್ವ ವಿಚಾರದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನಿಲುವು ತಟಸ್ಥವಾಗಿದೆ ಎಂದು ( Bank privatisation) ಗವರ್ವರ್ ಶಕ್ತಿಕಾಂತ ದಾಸ್ ಅವರು ತಿಳಿಸಿದ್ದಾರೆ.
ಬ್ಯಾಂಕಿಂಗ್ ವ್ಯವಸ್ಥೆಯು ಸುಗಮವಾಗಿ ನಡೆಯುತ್ತಿರಬೇಕು. ಬ್ಯಾಂಕಿಂಗ್ ವಲಯದ ನಿಯಂತ್ರಕನಾಗಿ ಇದನ್ನು ಖಾತರಿಪಡಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಆರ್‌ಬಿಐನ ಧ್ಯೇಯವಾಗಿದೆ. ಆದರೆ ಬ್ಯಾಂಕ್‌ಗಳ ಮಾಲಿಕತ್ವ ವಿಚಾರದಲ್ಲಿ ಆರ್‌ಬಿಐ ನಿಲುವು ತಟಸ್ಥವಾಗಿದೆ ಎಂದು ಗವರ್ನರ್ ಸ್ಪಷ್ಟಪಡಿಸಿದ್ದಾರೆ.
ಆರ್‌ಬಿಐನ ಬುಲೆಟಿನ್‌ನಲ್ಲಿ ಆರ್‌ಬಿಐ ಸಂಶೋಧಕರ ತಂಡದ ಸದಸ್ಯರು ಇತ್ತೀಚೆಗೆ ಸಾರ್ವಜನಿಕ ಬ್ಯಾಂಕ್‌ಗಳ ಬಿಗ್ ಬಾಂಗ್ ಖಾಸಗೀಕರಣ ಒಳ್ಳೆಯದಲ್ಲ ಎಂದಿದ್ದರು. ಆದರೆ ಇದು ತನ್ನ ಅಧಿಕೃತ ನಿಲುವು ಅಲ್ಲ ಎಂದು ಆರ್‌ಬಿಐ ಬಳಿಕ ಸ್ಪಷ್ಟನೆ ನೀಡಿತ್ತು.
” ಬ್ಯಾಂಕ್‌ಗಳ ಮಾಲೀಕರು ಬ್ಯಾಂಕ್‌ನಲ್ಲಿ ತಮ್ಮ ಷೇರು ಎಷ್ಟು ಇರಬೇಕು ಹಾಗೂ ಎಷ್ಟು ಮಾರಾಟ ಮಾಡಬೇಕು ಎಂಬುದನ್ನು ನಿರ್ಧರಿಸಬೇಕುʼʼ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಸಂದರ್ಶನವೊಂದರಲ್ಲಿ ತಿಳಿಸಿದರು.