ನವದೆಹಲಿ: ಡಿಜಿಟಲ್ ಸಾಲ ವಿತರಣೆಯನ್ನು ಗ್ರಾಹಕರಿಗೆ ಸುರಕ್ಷಿತಗೊಳಿಸುವ ನಿಟ್ಟಿನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶೀಘ್ರದಲ್ಲಿಯೇ ಹೊಸ ನೀತಿ ಬಿಡುಗಡೆಯಾಗಲಿದೆ.
ಡಿಜಿಟಲ್ ಸಾಲ ವಿತರಣೆ ದೇಶದಲ್ಲಿ ಜನಪ್ರಿಯವಾಗುತ್ತಿದೆ. ಆದರೆ ಇದರ ಸುರಕ್ಷತೆ ಬಗ್ಗೆ ಕಳವಳ ಕೂಡ ವ್ಯಕ್ತವಾಗಿದೆ. ಹೀಗಾಗಿ ಸುರಕ್ಷಿತ ಡಿಜಿಟಲ್ ಸಾಲ ವಿತರಣೆಗೆ ಆರ್‌ಬಿಐ ಹೊಸ ನೀತಿಯನ್ನು ಜಾರಿಗೊಳಿಸಲಿದೆ ಎಂದು ಗವರ್ನರ್ ಶಕ್ತಿಕಾಂತದಾಸ್ ತಿಳಿಸಿದ್ದಾರೆ.
ಡಿಜಿಟಲ್ ಸಾಲ ಪದ್ಧತಿಯಲ್ಲಿ ಮೊಬೈಲ್ ಆ್ಯಪ್‌ಗಳ ಮೂಲಕ ( Mobile app) ಸಣ್ಣ ಮೊತ್ತದ ಸಾಲವನ್ನು ವಿತರಿಸಲಾಗುತ್ತದೆ. ಮೊಬೈಲ್ ಆಪ್ ಸಾಲದ ಹೆಸರಿನಲ್ಲಿ ವಂಚನೆ ಪ್ರಕರಣಗಳು ನಡೆದಿವೆ. ಮೊಬೈಲ್ ಆ್ಯಪ್ ಸಾಲ ಪಡೆದು ಹಿಂತಿರುಗಿಸಲಾಗದೆ, ಸಾಲ ವಿತರಕರ ದೌರ್ಜನ್ಯಕ್ಕೆ ಆತ್ಮಹತ್ಯೆಗಳೂ ನಡೆದಿರುವ ಬಗ್ಗೆ ವರದಿಯಾಗಿವೆ.
ಆರ್‌ಬಿಐ ಡಿಜಿಟಲ್ ಸಾಲ ಪದ್ಧತಿಯನ್ನು ನಿಯಂತ್ರಿಸಿದರೆ ಸೂಕ್ತ ಎಂಬ ಅಭಿಪ್ರಾಯ ಹಣಕಾಸು ವಲಯದಲ್ಲಿ ಇದೆ. ಸಾಲ ರಿಕವರಿ ಏಜೆಂಟರು ಸಾಲಗಾರರಿಗೆ ಕಿರುಕುಳ ಕೊಡಬಾರದು. ಸಾಲ ಮರು ವಸೂಲಿಗೆ ಕಠೋರ ಕ್ರಮಗಳನ್ನು ಅನುಸರಿಸಬಾರದು ಎಂದು ಕೂಡ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ.
ಇದನ್ನೂ ಓದಿ: ಹಣದುಬ್ಬರ ಹತೋಟಿಗೆ ತರಲು 2 ವಾರಗಳಲ್ಲಿ 1000 ಕೋಟಿ ಡಾಲರ್ ಮಾರಾಟ ಮಾಡಿದ ಆರ್‌ಬಿಐ