ಮುಂಬಯಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಸಾಲದ ಆ್ಯಪ್ಗಳಲ್ಲಿ ಗ್ರಾಹಕರ ಹಿತ ರಕ್ಷಣೆಗೆ ಮಾರ್ಗದರ್ಶಿಯನ್ನು ಎಲ್ಲ ಬ್ಯಾಂಕ್ಗಳಿಗೆ ಮತ್ತು ಹಣಕಾಸು ಸಂಸ್ಥೆಗಳಿಗೆ ಬಿಡುಗಡೆಗೊಳಿಸಿದೆ. ಎಲ್ಲ ಬ್ಯಾಂಕ್ಗಳು, ಹಣಕಾಸು ಸಂಸ್ಥೆಗಳು, ಸಹಕಾರಿ ಬ್ಯಾಂಕ್ಗಳು, ಡಿಜಿಟಲ್ ಸಾಲದ ಆ್ಯಪ್ಗಳಲ್ಲಿ (Loan Apps) ಗ್ರಾಹಕರ ಹೆಸರು, ವಿಳಾಸ, ಸಂಪರ್ಕ ವಿವರಗಳನ್ನು ಮಾತ್ರ ಸಂಗ್ರಹಿಸಿಡಬಹುದು. ಆದರೆ ಬಯೊಮೆಟ್ರಿಕ್ ವಿವರಗಳನ್ನು ಸಂಗ್ರಹಿಸಿಡುವಂತಿಲ್ಲ ಎಂದು ಆರ್ಬಿಐ ಮಾರ್ಗದರ್ಶಿ ತಿಳಿಸಿದೆ.
ಆರ್ಬಿಐ ಎಲ್ಲ ಬ್ಯಾಂಕ್ಗಳು, ನಗರ ಸಹಕಾರ ಬ್ಯಾಂಕ್ಗಳು, ರಾಜ್ಯ ಸಹಕಾರ ಬ್ಯಾಂಕ್ಗಳು, ಜಿಲ್ಲಾ ಕೇಂದ್ರೀಯ ಸಹಕಾರಿ ಬ್ಯಾಂಕ್ಗಳು, ಬ್ಯಾಂಕೇತರ ಹಣಕಾಸು ಕಂಪನಿಗಳಿಗೆ (ಹೌಸಿಂಗ್ ಫೈನಾನ್ಸ್ ಕಂಪನಿ) ಆರ್ಬಿಐ ಈ ಮಾರ್ಗದರ್ಶಿಯನ್ನು ಬಿಡುಗಡೆಗೊಳಿಸಿದೆ.
ಮಾರ್ಗದರ್ಶಿಯ ಮುಖ್ಯಾಂಶಗಳು ಇಂತಿವೆ
- ಡಿಜಿಟಲ್ ಸಾಲದ ಮೊಬೈಲ್ ಅಪ್ಲಿಕೇಷನ್ಗಳು (ಆ್ಯಪ್) ಸಾಲಗಾರರ ಮೊಬೈಲ್ನ ಇತರ ರಿಸೋರ್ಸ್ಗಳ ಸಂಪರ್ಕ ಪಡೆಯಬಾರದು. ಅಂದರೆ ಮೊಬೈಲ್ ಫೋನ್ನ ಕಾಂಟ್ಯಾಕ್ಟ್ ಲಿಸ್ಟ್, ಕರೆಗಳ ಮಾಹಿತಿ, ಮೊಬೈಲ್ ವಿವರಗಳ ಸಂಪರ್ಕವನ್ನು ಪಡೆಯಬಾರದು. ಕೆವೈಸಿಗೆ ಮಾತ್ರ ಒಂದು ಸಲ ಕ್ಯಾಮೆರಾ, ಮೈಕ್ರೊಫೋನ್, ಲೊಕೇಶನ್ ಸಂಪರ್ಕ ಪೆಯಬಹುದು. ಅದಕ್ಕೂ ಸಾಲಗಾರರ ಒಪ್ಪಿಗೆ ಅಗತ್ಯ.
- ಸಾಲಗಾರರ ಯಾವೆಲ್ಲ ಮಾಹಿತಿಯನ್ನು ಸಂಗ್ರಹಿಸಲಾಗಿದೆ ಎಂಬ ವಿವರವನ್ನು ಡಿಜಿಟಲ್ ಸಾಲ ವಿತರಕರು ಒದಗಿಸಬೇಕು.
- ಸಾಲದ ಅವಧಿ, ಬಡ್ಡಿ ದರ ಸೇರಿದಂತೆ ಸಮಗ್ರ ವಿವರಗಳನ್ನು ಒಳಗೊಂಡಿರುವ ಹೇಳಿಕೆಯನ್ನು (key fact statement) ನೀಡಬೇಕು.
- ದಂಡ, ಶುಲ್ಕಗಳು ಒಟ್ಟು ಬಾಕಿ ಸಾಲವನ್ನು ಆಧರಿಸಿ ಇರಬೇಕು.
- ವಾರ್ಷಿಕ ಬಡ್ಡಿ ದರದ ವಿವರ, ಸಾಲ ಮರು ವಸೂಲಾತಿಯ ವಿಧಾನ, ಕ್ರಮಗಳ ವಿವರವನ್ನು ಸಾಲಗಾರರಿಗೆ ಮೊದಲೇ ಕೊಡಬೇಕು.
- ಕೀ ಫ್ಯಾಕ್ಟ್ ಸ್ಟೇಟ್ಮೆಂಟ್ನಲ್ಲಿ ಇಲ್ಲದ ಬಡ್ಡಿ ದರ, ಶುಲ್ಕವನ್ನು ಸಾಲಗಾರರಿಗೆ ವಿಧಿಸುವಂತಿಲ್ಲ.
- ಡಿಜಿಟಲ್ ಸಾಲ ವಿತರಕ ಸಂಸ್ಥೆಗಳು ತಮ್ಮ ವೆಬ್ಸೈಟ್ನಲ್ಲಿ ಗ್ರಾಹಕರಿಗೆ ದೂರು ಸಲ್ಲಿಸಲು ಅವಕಾಶ ಕಲ್ಪಿಸಬೇಕು.
- ಸಾಲಗಾರರ ದೂರನ್ನು ೩೦ ದಿನದೊಳಗೆ ಇತ್ಯರ್ಥಪಡಿಸದಿದ್ದರೆ ಆರ್ಬಿಐ ಒಂಬುಡ್ಸ್ಮನ್ಗೆ ದೂರು ಸಲ್ಲಿಸಬಹುದು.