Site icon Vistara News

RBI repo rate hike| ಬ್ಯಾಂಕ್‌ಗಳಲ್ಲಿ ಸಾಲಗಳ ಬಡ್ಡಿ ದರ 0.50% ಹೆಚ್ಚಳ ಸಂಭವ

loan

ನವ ದೆಹಲಿ: ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ತನ್ನ ರೆಪೊ ದರದಲ್ಲಿ ಶುಕ್ರವಾರ ೦.೫೦% ಏರಿಕೆ ಮಾಡಿದ್ದು, ೫.೪೦%ಕ್ಕೆ ಹೆಚ್ಚಳವಾಗಿದೆ. ತಕ್ಷಣದಿಂದಲೇ ಇದು ಅನ್ವಯವಾಗುತ್ತಿದೆ. ಹೀಗಾಗಿ ಬ್ಯಾಂಕ್‌ಗಳೂ ಕೂಡಲೇ ತಮ್ಮ ಗೃಹ ಸಾಲ, ವಾಹನ ಸಾಲ, ಕಾರ್ಪೊರೇಟ್‌ ಸಾಲ ಮತ್ತು ವೈಯಕ್ತಿಕ ಸಾಲದ ಬಡ್ಡಿ ದರಗಳಲ್ಲಿ ೦.೫೦% ಹೆಚ್ಚಳ ಮಾಡುವ ಸಾಧ್ಯತೆ ಇದೆ ಎಂದು ಹಣಕಾಸು ತಜ್ಞರು ತಿಳಿಸಿದ್ದಾರೆ.

ರೆಪೊ ದರ ಎಂದರೆ ಬ್ಯಾಂಕ್‌ಗಳು ಆರ್‌ಬಿಐನಿಂದ ಪಡೆಯುವ ಹಣಕ್ಕೆ ನೀಡುವ ಬಡ್ಡಿ ದರ. ಈ ಹಣವನ್ನು ಬ್ಯಾಂಕ್‌ಗಳು ಸಾಲ ವಿತರಣೆಗೆ ಬಲಸುತ್ತವೆ. ಆದರೆ ಇದೀಗ ಆರ್‌ಬಿಐನಿಂದ ಹಣ ಪಡೆಯಲು ೦.೫೦%ರಷ್ಟು ಹೆಚ್ಚು ವೆಚ್ಚವಾಗುವುದರಿಂದ ಬ್ಯಾಂಕ್‌ಗಳು ಅದನ್ನು ಸಾಲಗಾರರಿಗೆ ವರ್ಗಾಯಿಸಲಿದೆ. ಹೀಗಾಗಿ ಗೃಹ ಸಾಲ, ವಾಹನ ಸಾಲ, ಕಾರ್ಪೊರೇಟ್‌ ಸಾಲದ ಇಎಂಐ ಹೆಚ್ಚಳವಾಗಲಿದೆ.

50 ಲಕ್ಷ ರೂ. ಗೃಹ ಸಾಲಕ್ಕೆ ಹೆಚ್ಚುವರಿ ಬಡ್ಡಿ ಎಷ್ಟು?: ಉದಾಹರಣೆಗೆ ಹಾಲಿ ಗೃಹ ಸಾಲಗಾರರೊಬ್ಬರು ೫೦ ಲಕ್ಷ ರೂ.ಗಳ ಗೃಹ ಸಾಲವನ್ನು ಹೊಂದಿದ್ದಾರೆ ಎಂದಿಟ್ಟುಕೊಳ್ಳಿ. ೨೦ ವರ್ಷ ಅವಧಿಯ ಸಾಲದ ಬಡ್ಡಿ ದರ ೭.೬೫% ಆಗಿದ್ದು, ಇದೀಗ ೦.೫೦ % ಏರಿಕೆಯಾದರೆ, ಹೊಸ ಬಡ್ಡಿ ದರ ೮.೧೫% ಆಗುತ್ತದೆ. ಇದರಿಂದಾಗಿ ಸಾಲಗಾರರು ಹೆಚ್ಚುವರಿ 3.72 ಲಕ್ಷ ರೂ. ಬಡ್ಡಿಯನ್ನು ಕೊಡಬೇಕಾಗುತ್ತದೆ. ಇಎಂಐ ಕಂತುಗಳು ಹೆಚ್ಚುತ್ತದೆ.

Exit mobile version