ಮುಂಬಯಿ: ಭಾರತೀಯ ಬ್ಯಾಂಕ್‌ಗಳು ಈ ವರ್ಷ ತಮ್ಮ ಬಂಡವಾಳವನ್ನು ಸುಧಾರಿಸಿವೆ. ಸ್ವತ್ತಿನ ಗುಣಮಟ್ಟ ಕೂಡ ವೃದ್ಧಿಸಿರಬಹುದು. ಆದರೆ ಮುಂಬರುವ ದಿನಗಳಲ್ಲಿ ಅತ್ಯಧಿಕ ಅನಿಶ್ಚಿತತೆ ಕಂಡು ಬರುವ ಸಾಧ್ಯತೆ ಇದೆ (RBI Report) ಎಂದು ಆರ್‌ಬಿಐ ಎಚ್ಚರಿಸಿದೆ.
ಅಂತಾರಾಷ್ಟ್ರೀಯ ವಿಪ್ಲವಗಳು, ಬಿಗಿಯಾದ ಆರ್ಥಿಕ ನೀತಿ, ಆರ್ಥಿಕ ಹಿಂಜರಿತದ ಪರಿಣಾಮಗಳು ಭಾರತವನ್ನೂ ಕಾಡುವ ಸಾಧ್ಯತೆ ಇದೆ. ಇದು ಬ್ಯಾಂಕ್‌ಗಳ ಲಾಭಾಂಶ ಮತ್ತು ಸ್ವತ್ತಿನ ಗುಣಮಟ್ಟದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಆರ್‌ಬಿಐ ಮಂಗಳವಾರ ಬಿಡುಗಡೆಗೊಳಿಸಿದ ವರದಿಯಲ್ಲಿ ತಿಳಿಸಿದೆ.
2022ರಲ್ಲಿ ಜಾಗತಿಕ ಆರ್ಥಿಕ ಬೆಳವಣಿಗೆ ಮುಗ್ಗರಿಸಿದೆ. 2023ರಲ್ಲಿ ಜಾಗತಿಕ ಆರ್ಥಿಕ ಹಿಂಜರಿತದ ಭೀತಿ ಆವರಿಸಿದೆ. ಇದರ ಪರಿಣಾಮ ಬ್ಯಾಂಕ್‌ಗಳಲ್ಲಿ ಸಾಲದ ವಿತರಣೆ ಕಡಿಮೆಯಾಗಬಹುದು. ಅಂದರೆ ಬ್ಯಾಂಕ್‌ಗಳ ಲಾಭವೂ ತಗ್ಗಬಹುದು ಎಂದು ಆರ್‌ಬಿಐ ತಿಳಿಸಿದೆ.