Site icon Vistara News

ರೂಪಾಯಿಯನ್ನು ಆರ್‌ಬಿಐ ಅಂತಾರಾಷ್ಟ್ರೀಯ ಕರೆನ್ಸಿಯಾಗಿಸಬೇಕು ಎಂದ ಎಸ್‌ಬಿಐ ವರದಿ

rupee

ನವ ದೆಹಲಿ: ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ರೂಪಾಯಿಯನ್ನು ಅಂತಾರಾಷ್ಟ್ರೀಯ ಕರೆನ್ಸಿಯಾಗಿ ಹೆಚ್ಚು ಜನಪ್ರಿಯಗೊಳಿಸಬೇಕು. ಅದರ ಅಂತಾರಾಷ್ಟ್ರೀಕರಣ ಅಗತ್ಯ ಎಂದು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಸಂಶೋಧನಾ ವರದಿ ತಿಳಿಸಿದೆ.

ರೂಪಾಯಿಯನ್ನು ಅಂತಾರಾಷ್ಟ್ರೀಕರಣಗೊಳಿಸಲು ಆರ್‌ಬಿಐ ಪ್ರಜ್ಞಾಪೂರ್ವಕವಾಗಿ ಯತ್ನಿಸಬೇಕು. ರಷ್ಯಾ-ಉಕ್ರೇನ್‌ ಸಮರದ ಪರಿಣಾಮ ಅಂತಾರಾಷ್ಟ್ರೀಯ ಪೇಮೆಂಟ್‌ ವ್ಯವಸ್ಥೆಯಲ್ಲಿ ಅಡಚಣೆ ಉಂಟಾಗಿದೆ. ಇದು ಭಾರತದ ರೂಪಾಯಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯಗೊಳಿಸಲು ಉತ್ತಮ ಅವಕಾಶವನ್ನು ಸೃಷ್ಟಿಸಿದೆ ಎಂದು ಎಸ್‌ಬಿಐ ತಿಳಿಸಿದೆ.

ಎಸ್‌ಬಿಐ ಪ್ರಕಾರ ಜಾಗತಿಕ ಆರ್ಥಿಕತೆ ಅಸ್ಥಿರವಾಗಿದ್ದು, ಲೋಹ, ಅಮೂಲ್ಯ ಲೋಹಗಳು, ಕೃಷಿ ಉತ್ಪನ್ನಗಳ ದರಗಳು ಕಳೆದ ೫೨ ವಾರಗಳ ಗರಿಷ್ಠ ಮಟ್ಟದಿಂದ ೨೫% ಇಳಿದಿವೆ. ಜಾಗತಿಕ ಆರ್ಥಿಕತೆಯ ಮಂದಗತಿ ಪೂರ್ಣ ಪ್ರಮಾಣದ ಹಿಂಜರಿತಕ್ಕೆ ಕಾರಣವಾಗಬಹುದು ಎಂದು ಮಾರುಕಟ್ಟೆ ನಿರೀಕ್ಷಿಸಿದೆ.

Exit mobile version