ನವ ದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2022-23 ರಲ್ಲಿ ಡಿಜಿಟಲ್ ಕರೆನ್ಸಿಯನ್ನು ಬಿಡುಗಡೆಗೊಳಿಸಲು ಬ್ಯಾಂಕ್‌ಗಳು ಹಾಗೂ ಹಣಕಾಸು ತಂತ್ರಜ್ಞಾನ ಸಂಸ್ಥೆಗಳ ಜತೆಗೆ ಮಾತುಕತೆ (digital currency) ನಡೆಸಿದೆ.
ಅಮೆರಿಕ ಮೂಲದ ಫಿನ್‌ಟೆಕ್ ಕಂಪನಿ ಎಫ್‌ಐಎಸ್ ಮತ್ತು ಸಾರ್ವಜನಿಕ ವಲಯದ ನಾಲ್ಕು ಬ್ಯಾಂಕ್‌ಗಳ ಜತೆಗೆ ಆರ್‌ಬಿಐ ಮಾತುಕತೆ ನಡೆಸಿದ್ದು, ಪ್ರಸಕ್ತ ಆರ್ಥಿಕ ಸಾಲಿನಲ್ಲಿಯೇ ( 2022-23 ) ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿಯನ್ನು (Central bank digital currency) ಪ್ರಾಯೋಗಿಕವಾಗಿ ಬಿಡುಗಡೆಗೊಳಿಸಲು ಸಿದ್ಧತೆ ನಡೆಸಿದೆ.
ಎಫ್‌ಐಎಸ್ ಈಗಾಗಲೇ ಆರ್‌ಬಿಐ ಇನ್ನೊವೇಶನ್ ಹಬ್ ಜತೆ ಹಲವಾರು ಸುತ್ತಿನ ಮಾತುಕತೆ ನಡೆಸಿದೆ ಎಂದು ಎಫ್‌ಐಎಸ್‌ನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಡಿಜಿಟಲ್ ಕರೆನ್ಸಿಯನ್ನು ಜಾರಿಗೊಳಿಸುವ ಬಗ್ಗೆ ಬ್ಯಾಂಕ್‌ಗಳಿಗೆ ಫಿನ್‌ಟೆಕ್ ಕಂಪನಿ ತರಬೇತಿ ನೀಡಲಿದೆ.
ಇದನ್ನೂ ಓದಿ: Digital currency: ಭಾರತದ ಡಿಜಿಟಲ್ ಕರೆನ್ಸಿ ಹಂತಗಳಲ್ಲಿ ಚಲಾವಣೆ ಸಾಧ್ಯತೆ, ಆರ್‌ಬಿಐ ವಾರ್ಷಿಕ ವರದಿ ಇಂಗಿತ