ಮುಂಬಯಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ೩೪ ಅನಧಿಕೃತ ಫೊರೆಕ್ಸ್ ಟ್ರೇಡಿಂಗ್ ಪ್ಲಾಟ್‌ಫಾರ್ಮ್‌ಗಳ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಸಿದೆ. ಈ ಫೊರೆಕ್ಸ್ ಟ್ರೇಡಿಂಗ್ ಪ್ಲಾಟ್‌ಫಾರ್ಮ್‌ಗಳ (ಎಫ್ ಟಿಪಿ) ಮೂಲಕ ವಿದೇಶಿ ವಿನಿಮಯ ವ್ಯವಹಾರ ನಡೆಸದಿರುವಂತೆ ತಿಳಿಸಿದೆ. ಆರ್‌ಬಿಐ ವೆಬ್‌ಸೈಟ್‌ನಲ್ಲಿ ( RBI Alert List) ಈ 34 ಅನಧಿಕೃತ ಫೊರೆಕ್ಸ್ ಟ್ರೇಡಿಂಗ್ ಪ್ಲಾಟ್‌ಫಾರ್ಮ್‌ಗಳ ವಿವರ ಇದೆ.
ಆರ್‌ಬಿಐನಿಂದ ಪ್ರಾಮಾಣೀಕೃತವಲ್ಲದ ಎಫ್‌ಟಿಪಿ ಮೂಲಕ ವಿದೇಶಿ ವಿನಿಮಯ ವ್ಯವಹಾರ ನಡೆಸುವುದು ಕಾನೂನುಬಾಹಿರವಾಗಿದ್ದು, ತಪ್ಪಿತಸ್ಥರು ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಆರ್‌ಬಿಐ ಎಚ್ಚರಿಸಿದೆ.
ಈಗ ಪ್ರಕಟಿಸಿರುವ ಪಟ್ಟಿಯಲ್ಲಿ ಇಲ್ಲದ ಎಲ್ಲ ಫೊರೆಕ್ಸ್ ಟ್ರೇಡಿಂಗ್ ಪ್ಲಾಟ್‌ಫಾರ್ಮ್‌ಗಳು ಅಧಿಕೃತ ಎಂದು ಭಾವಿಸಬಾರದು. ಈಗ ಪ್ರಕಟಿಸಿರುವುದು ಸಮಗ್ರ ಪಟ್ಟಿ ಅಲ್ಲ ಎಂದು ಆರ್‌ಬಿಐ ತಿಳಿಸಿದೆ.