ನವ ದೆಹಲಿ: ಕೇಂದ್ರ ಸರ್ಕಾರ ದೇಶೀಯವಾಗಿ ಉತ್ಪಾದನೆಯಾಗುವ ಕಚ್ಚಾ ತೈಲ, ಅದರ ರಫ್ತು ಮತ್ತು ಎಟಿಎಫ್ ಮೇಲಿನ ವಿಂಡ್‌ಫಾಲ್ ಪ್ರಾಫಿಟ್ ತೆರಿಗೆಯನ್ನು ಕಡಿತಗೊಳಿಸಿದೆ. ಕಚ್ಚಾ ತೈಲದ ಮೇಲಿನ ತೆರಿಗೆಯನ್ನು (Tax on crude oil) ಪ್ರತಿ ಟನ್ನಿಗೆ 5,050 ರೂ.ಗಳಿಂದ 4,350 ರೂ.ಗೆ ತಗ್ಗಿಸಲಾಗಿದೆ. ಎಟಿಎಫ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ಗೆ 6 ರೂ.ಗಳಿಂದ 1.50 ರೂ.ಗೆ ಕಡಿತಗೊಳಿಸಲಾಗಿದೆ. ಕಳೆದ ಫೆಬ್ರವರಿ 4ರಂದು ವಿಂಡ್‌ಫಾಲ್ ತೆರಿಗೆಯನ್ನು ಏರಿಸಲಾಗಿತ್ತು.
ಏನಿದು ವಿಂಡ್‌ಫಾಲ್ ಪ್ರಾಫಿಟ್ ಟ್ಯಾಕ್ಸ್?
ಪೆಟ್ರೋಲಿಯಂ ಉತ್ಪನ್ನಗಳ ಮಾರಾಟದಿಂದ ಅನಿರೀಕ್ಷಿತವಾಗಿ ಹೆಚ್ಚಿನ ಲಾಭ ಸಿಕ್ಕಿದಾಗ ಅದರ ಮೇಲಿನ ತೆರಿಗೆಯನ್ನು ವಿಂಡ್‌ಫಾಲ್ ಪ್ರಾಫಿಟ್ ತೆರಿಗೆ ಮೂಲಕ ಹೆಚ್ಚಿಸಬಹುದು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ದಿಢೀರ್ ಏರಿದಾಗ, ಭಾರತದಲ್ಲಿ ಕಚ್ಚಾ ತೈಲ ಉತ್ಪಾದಿಸುವವರಿಗೆ ಕೂಡ ಹೆಚ್ಚಿನ ಲಾಭವಾಗುತ್ತದೆ. ಆಗ ಅದರ ಮೇಲೆ ಸರ್ಕಾರ ವಿಂಡ್ ಫಾಲ್ ಟ್ಯಾಕ್ಸ್ ವಿಧಿಸಬಹುದು.