ಸ್ಯಾನ್ ಫ್ರಾನ್ಸಿಸ್ಕೊ: ಸಾಮಾಜಿಕ ಜಾಲತಾಣ ದಿಗ್ಗಜ ಟ್ವಿಟರ್, ಉದ್ಯಮಿ ಎಲನ್ ಮಸ್ಕ್ ಅವರಿಗೆ ಕಂಪನಿಯನ್ನು ಖರೀದಿಸಲು ನಿಯಂತ್ರಕ ವ್ಯವಸ್ಥೆಗಳು ನೀಡಿದ್ದ ಕಾಲಾವಕಾಶ ಮುಕ್ತಾಯವಾಗಿದೆ ಎಂದು ತಿಳಿಸಿದೆ.
ಟ್ವಿಟರ್ ಅನ್ನು ಖರೀದಿಸಲು 44 ಶತಕೋಟಿ ಡಾಲರ್ (ಅಂದಾಜು 33 ಲಕ್ಷ ಕೋಟಿ ರೂ.) ಡೀಲ್‌ಗೆ ಮುಂದಾಗಿದ್ದ ಮಸ್ಕ್, ದಿಢೀರ್ ಒಪ್ಪಂದವನ್ನು ತಡೆ ಹಿಡಿದಿದ್ದರು. ಹೀಗಾಗಿ ಡೀಲ್ ಕಳೆದ ಒಂದು ತಿಂಗಳಿನಿಂದ ನನೆಗುದಿಯಲ್ಲಿತ್ತು.
ಇದೀಗ ಟ್ವಿಟರ್, ಡೀಲ್ ಅನ್ನು ಅಂತಿಮಪಡಿಸಲು ನೀಡಿದ್ದ ಕಾಲಾವಕಾಶ ಮುಗಿದಿದೆ. ಇನ್ನು ಮಸ್ಕ್ ಡೀಲ್ ಅನ್ನು ಮುಕ್ತಾಯಗೊಳಿಸಬೇಕಿದ್ದರೆ ಟ್ವಿಟರ್‌ನ ಷೇರುದಾರರ ಅನುಮೋದನೆಯನ್ನು ಪಡೆಯಬೇಕಾಗುತ್ತದೆ. ಹಾಗೂ ನಿಯಂತ್ರಕ ವ್ಯವಸ್ಥೆಗಳ ಅನುಮೋದನೆ ಬೇಕು ಎಂದಿದೆ.
ಎಲನ್ ಮಸ್ಕ್ ಟ್ವಿಟರ್ ಖರೀದಿಗೆ ಬೇಕಾದ ಹಣಕಾಸು ವ್ಯವಸ್ಥೆಯನ್ನು ಈಗಾಗಲೇ ಮಾಡಿಕೊಂಡಿದ್ದಾರೆ. 33.5 ಶತಕೋಟಿ ಡಾಲರ್ ಮೊತ್ತದ ಈಕ್ವಿಟಿ ನೆರವು ಮತ್ತು 13 ಶತಕೋಟಿ ಡಾಲರ್ ಗಳ ಸಾಲ ಇದರಲ್ಲಿ ಸೇರಿದೆ.
ಇದನ್ನೂ ಓದಿ: ಫೇಸ್‌ಬುಕ್, ಟ್ವಿಟರ್ ಇತ್ಯಾದಿ ಜಾಲ ತಾಣಗಳ ನಿಯಂತ್ರಣಕ್ಕೆ ಹೆಚ್ಚಿನ ಅಧಿಕಾರ ಬಯಸಿದ ಕೇಂದ್ರ