Site icon Vistara News

REIT Investment : ರಿಯಲ್‌ ಎಸ್ಟೇಟ್‌ ಇನ್ವೆಸ್ಟ್‌ಮೆಂಟ್‌ ಟ್ರಸ್ಟ್‌ನಲ್ಲಿ ಹೂಡಿಕೆಯ ಲಾಭವೇನು?

real estate

real estate

ರಿಯಲ್‌ ಎಸ್ಟೇಟ್‌ ಇನ್ವೆಸ್ಟ್‌ಮೆಂಟ್‌ ಟ್ರಸ್ಟ್‌ ಅಥವಾ ಆರ್‌ಇಐಟಿ (REIT Investment) ಒಂದು ಹೂಡಿಕೆಯ ಸಾಧನವಾಗಿದ್ದು, ಹೂಡಿಕೆದಾರರಿಗೆ ರಿಯಾಲ್ಟಿ ವಲಯದಲ್ಲಿ ಹೂಡಿಕೆಗೆ ಅವಕಾಶ ನೀಡುತ್ತದೆ. ಆರ್‌ಇಐಟಿ ಒಂದು ಕಂಪನಿಯಾಗಿದ್ದು ರಿಯಲ್‌ ಎಸ್ಟೇಟ್‌ ವಲಯದ ಪ್ರಾಪರ್ಟಿಗಳಲ್ಲಿ, ವಸತಿ ಹಾಗೂ ಕಚೇರಿ ಕಟ್ಟಡ, ಹೋಟೆಲ್‌, ಆಸ್ಪತ್ರೆ, ವೇರ್‌ ಹೌಸ್‌, ಶಾಪಿಂಗ್‌ ಮಾಲ್‌ಗಳಲ್ಲಿ ಹೂಡಿಕೆ ಮಾಡುತ್ತದೆ. ಪ್ರತಿಯಾಗಿ ಹೂಡಿಕೆದಾರರಿಗೆ ಡಿವಿಡೆಂಡ್‌ ಹಾಗೂ ಬಡ್ಡಿ ಸಿಗುತ್ತದೆ. ಕ್ಯಾಪಿಟಲ್‌ ರಿಪೇಮೆಂಟ್‌ ರೂಪದಲ್ಲೂ ಆದಾಯ ಸಿಗುತ್ತದೆ.

ಮಾರುಕಟ್ಟೆಯಲ್ಲಿ ಈಗ ಬ್ರೂಕ್‌ ಫೀಲ್ಡ್‌ ಇಂಡಿಯಾ ರಿಯಲ್‌ ಎಸ್ಟೇಟ್‌ ಟ್ರಸ್ಟ್‌, ಎಂಬಸಿ ಆಫೀಸ್‌ ಪಾರ್ಕ್ಸ್‌ ಆರ್‌ ಇಐಟಿ, ನೆಕ್ಸಸ್‌ ಸೆಲೆಕ್ಟ್‌ ಟ್ರಸ್ಟ್‌ ಎಂಬ ನೋಂದಾಯಿತ ಆರ್‌ ಇಐಟಿಗಳು ಇವೆ. ಇದರಲ್ಲಿ ಹೂಡಿಕೆ ಮಾಡುವುದರಿಂದ ಹೂಡಿಕೆದಾರರಿಗೆ ತಮ್ಮ ಖಾತೆಯಲ್ಲಿ ವೈವಿಧ್ಯತೆಗೂ ಅನುಕೂಲವಾಗುತ್ತದೆ. ಆರ್‌ಇಐಟಿಗಳನ್ನು 1960ರಲ್ಲಿ ಅಮೆರಿಕದಲ್ಲಿ ಪರಿಚಯಿಸಲಾಯಿತು. ಇದಾದ ಬಳಿಕ 30ಕ್ಕೂ ಹೆಚ್ಚು ದೇಶಗಳು ಆರ್‌ಇಐಟಿಗಳ ಕಾರ್ಯಾಚರಣೆಗಳಿಗೆ ಅನುಮತಿ ನೀಡಿವೆ. ಆರ್‌ಇಐಟಿಗಳು ಏಷ್ಯಾದಲ್ಲಿ ಜನಪ್ರಿಯವಾಗಿವೆ. ಸಿಂಗಾಪುರ ಮತ್ತು ಹಾಂಕಾಂಗ್‌ಗೆ ಹೋಲಿಸಿದರೆ ಭಾರತಕ್ಕೆ ಹೊಸತು.

ಭಾರತದಲ್ಲಿ 2014ರಲ್ಲಿ ರಿಯಲ್‌ ಎಸ್ಟೇಟ್‌ ಇನ್ವೆಸ್ಟ್‌ಮೆಂಟ್‌ ಟ್ರಸ್ಟ್‌ ಯೋಜನೆಗೆ ಅನುಮತಿ ನೀಡಲಾಯಿತು. ಆಸಕ್ತ ಹೂಡಿಕೆದಾರರಿಗೆ ಇದು ನಿಯಮಿತ ಆದಾಯವನ್ನು ನೀಡುತ್ತದೆ. ಹೆಚ್ಚಿನ ಲಿಕ್ವಿಡಿಟಿ ಇದಕ್ಕಿದೆ. ಹಣದುಬ್ಬರದ ಎದುರು ಹೆಡ್ಜ್‌ ಆಗಿಯೂ ಇದನ್ನು ಬಳಸಬಹುದು. ಮಾರುಕಟಟೆಯ ಏರಿಳಿತದ ರಿಸ್ಕ್‌ಗಳನ್ನು ಎದುರಿಸಲೂ ಸಹಕಾರಿ. ನೇರವಾಗಿ ರಿಯಾಲ್ಟಿಯಲ್ಲಿ ಹೂಡಿಕೆಗೆ ದೊಡ್ಡ ಮೊತ್ತ ಬೇಕಾದೀತು. ಆದರೆ ಇದರಲ್ಲಿ ಸಣ್ಣ ಮೊತ್ತದಿಂದಲೂ ಹೂಡಿಕೆಯನ್ನು ಆರಂಭಿಸಬಹುದು. ಅಭಿವೃದ್ಧಿ ಹೊಂದುತ್ತಿರುವ ಇಕಾನಮಿಯಲ್ಲಿ ಹೂಡಿಕೆದಾರರಿಗೆ ಹೆಚ್ಚು ಲಾಭದಾಯಕ.

ಇದನ್ನೂ ಓದಿ: Vijayanagara News: ಪ್ರವಾಸಿ ಮಹಿಳೆಯ ಬ್ಯಾಗ್‌ ಮರಳಿಸಿ ಮಾನವೀಯತೆ ಮೆರೆದ ಹಂಪಿ ಗೈಡ್‌

ಯಾಕೆ ಮಹತ್ವಪೂರ್ಣ: ಭಾರತೀಯ ರಿಯಲ್‌ ಎಸ್ಟೇಟ್‌ ಕ್ಷೇತ್ರ ನಗದು ಹರಿವಿನ ಕೊರತೆ ಎದುರಿಸುವ ಸಂದರ್ಭ ಆರ್‌ಇಐಟಿಯಿಂದ ಹೂಡಿಕೆಯ ಹರಿವು ಹೆಚ್ಚಳವಾದೀತು. ಇದರಿಂದ ಡೆವಲಪರ್‌ಗಳಿಗೆ ಹೊಸ ಯೋಜನೆಗಳನ್ನು ಕೈಗೊಳ್ಳಲು ಅನುಕೂಲವಾಗುತ್ತದೆ. ಭಾರತೀಯ ಹೂಡಿಕೆದಾರರಿಗೆ ರೆಗ್ಯುಲರ್‌ ಆದಾಯಕ್ಕೆ ಹೆಚ್ಚಿನ ಆಯ್ಕೆಗಳು ಇಲ್ಲ. ಇಂಥ ಸಂದರ್ಭ ಇದು ಒಂದು ಸೂಕ್ತ ಆಯ್ಕೆಯಾಗಿದೆ. ನೀವು ಆರ್‌ ಇಐಟಿಗಳಲ್ಲಿ ಪ್ರೈಮರಿ ಮತ್ತು ಸೆಕೆಂಡರಿ ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡಬಹುದು.

Exit mobile version