Site icon Vistara News

ITR New form : 2023-24 ಸಾಲಿನ ಐಟಿಆರ್‌ ಫಾರ್ಮ್‌ ಬಿಡುಗಡೆ, ಏಪ್ರಿಲ್‌ 1ರಿಂದ ಜಾರಿ, ಯಾರಿಗೆ ಯಾವ ಅರ್ಜಿ? ಇಲ್ಲಿದೆ ಡಿಟೇಲ್ಸ್

tax

ITR

ನವ ದೆಹಲಿ: ಆದಾಯ ತೆರಿಗೆ ಇಲಾಖೆಯು ಬುಧವಾರ 2023-24 ಸಾಲಿಗೆ (ಮೌಲ್ಯ ಮಾಪನಾ ವರ್ಷ-Assessment year 2023-24) ಆದಾಯ ತೆರಿಗೆ ರಿಟರ್ನ್‌ (Income Tax Return -ITR) ಫಾರ್ಮ್‌ಗಳನ್ನು ಬಿಡುಗಡೆಗೊಳಿಸಿದೆ. ಏಪ್ರಿಲ್‌ 1ರಿಂದ ಇದು ಜಾರಿಗೆ ಬರಲಿದೆ. ತೆರಿಗೆದಾರರ ಅನುಕೂಲಕ್ಕಾಗಿ ಎರಡು ತಿಂಗಳು ಮೊದಲೇ ಅಧಿಸೂಚನೆಗೊಳಿಸಲಾಗಿದೆ.

ತೆರಿಗೆದಾರರಿಗೆ ಆದಾಯ ತೆರಿಗೆ ರಿಟರ್ನ್‌ ಫೈಲಿಂಗ್‌ ಅನ್ನು ಸುಲಭವಾಗಿಸಲು ಐಟಿಆರ್‌ ಫಾರ್ಮ್‌ಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಲ ಗಣನೀಯ ಬದಲಾವಣೆ ಮಾಡಿಲ್ಲ. ನೇರ ತೆರಿಗೆಗಳ ಕೇಂದ್ರೀಯ ಮಂಡಳಿಯು (Central Board Direct Taxes) ಕಳೆದ ಫೆಬ್ರವರಿ 10ರಂದು ಐಟಿಆರ್‌ ಫಾರ್ಮ್‌ಗಳ (1-6) ಬಗ್ಗೆ ಅಧಿಸೂಚನೆ ಹೊರಡಿಸಿತ್ತು. ವೈಯಕ್ತಿಕ ತೆರಿಗೆದಾರರು, ವೃತ್ತಿಪರರು, ಬಿಸಿನೆಸ್‌ ನಡೆಸುವವರಿಗೆ ಐಟಿಆರ್‌ ಅರ್ಜಿ ನಮೂನೆಗಳನ್ನು ಬಿಡುಗಡೆಗೊಳಿಸಲಾಗಿದೆ. ಈ ಅರ್ಜಿ ನಮೂನೆಗಳು 2023ರ ಏಪ್ರಿಲ್‌ 1ರಿಂದ ಲಭಿಸಲಿವೆ.

ಐಟಿಆರ್‌ ಫಾರ್ಮ್‌ 1 (ಸಹಜ್)‌ ಮತ್ತು ಐಟಿಆರ್‌ ಫಾರ್ಮ್‌ 4 (ಸುಗಮ್)‌ ಭಾರಿ ಸಂಖ್ಯೆಯಲ್ಲಿ ಸಣ್ಣ ಮತ್ತು ಮಧ್ಯಮ ತೆರಿಗೆದಾರರಿಗೆ ಅನ್ವಯವಾಗುತ್ತದೆ. 50 ಲಕ್ಷ ರೂ. ತನಕ ಆದಾಯ ಇರುವವರು (ವೇತನ, ಒಂದು ವಸತಿ ಪ್ರಾಪರ್ಟಿ, 5,000 ರೂ. ತನಕ ಕೃಷಿ ಮೂಲದ ಆದಾಯ ಇರುವವರು, ಬಡ್ಡಿ ಮತ್ತು ಇತರ ಮೂಲಗಳಿಂದ ಆದಾಯ) ಐಟಿಆರ್-‌1 ಅನ್ನು ಭರ್ತಿ ಮಾಡಬೇಕು. 50 ಲಕ್ಷ ರೂ. ತನಕ ಆದಾಯ ಇರುವ ಕಂಪನಿಗಳು ಐಟಿಆರ್-‌4 ಅನ್ನು ಬಳಸಬೇಕು. ವಸತಿ ಆಸ್ತಿಗಳ ಮೂಲಕ ಆದಾಯ ಗಳಿಸುವವರು ಐಟಿಆರ್-‌2 ಅನ್ನು ಬಳಸಬೇಕು. ವೃತ್ತಿಪರರು ಐಟಿಆರ್-‌3 ಅನ್ನು ಭರ್ತಿಗೊಳಿಸಬೇಕು. ಐಟಿಆರ್-‌5, ಐಟಿಆರ್-‌6 ಅನ್ನು ಎಲ್‌ಎಲ್‌ಪಿಗಳು (ಲಿಮಿಟೆಡ್‌ ಲಾಯಬಿಲಿಟಿ ಪಾರ್ಟನರ್‌ಶಿಪ್)‌ ಮತ್ತು ಬಿಸಿನೆಸ್‌ ನಡೆಸುವವರು ಬಳಸಬಹುದು. ಟ್ರಸ್ಟ್‌ಗಳು, ರಾಜಕೀಯ ಪಕ್ಷಗಳು, ಚಾರಿಟೆಬಲ್‌ ಸಂಸ್ಥೆಗಳು ಐಟಿಆರ್‌ ಫಾರ್ಮ್‌ 7 ಅನ್ನು ಬಳಸಬಹುದು.

ಐಟಿಆರ್‌ ಫಾರ್ಮ್‌ಗಳು ಎಲ್ಲಿ ಲಭಿಸುತ್ತವೆ?

ಐಟಿಆರ್‌ ಫಾರ್ಮ್‌ಗಳು ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ನಲ್ಲಿ www.incometaxindia.gov.in ಲಭ್ಯವಿದೆ.

Exit mobile version