Site icon Vistara News

Reliance AGM | ತೈಲ-ರಾಸಾಯನಿಕ ವಹಿವಾಟಿನಲ್ಲಿ 5 ಲಕ್ಷ ಕೋಟಿ ರೂ. ದಾಟಿದ ರಿಲಯನ್ಸ್‌ ಆದಾಯ

RIL-JAMNAGAR

ಮುಂಬಯಿ: ರಿಲಯನ್ಸ್‌ ಇಂಡಸ್ಟ್ರೀಸ್‌ ೨೦೨೧-೨೨ರಲ್ಲಿ ತೈಲ-ರಾಸಾಯನಿಕಗಳ ವಹಿವಾಟಿನಲ್ಲಿ ವಾರ್ಷಿಕ ೫ ಲಕ್ಷ ಕೋಟಿ ರೂ.ಗೂ ಹೆಚ್ಚು ಆದಾಯ ಗಳಿಸಿದೆ. ಮುಂದಿನ ೫ ವರ್ಷಗಳಲ್ಲಿ ರಾಸಾಯನಿಕ ಉದ್ದಿಮೆ ವಲಯದಲ್ಲಿ ೭೫,೦೦೦ ಕೋಟಿ ರೂ.ಗಳನ್ನು ಹೂಡಿಕೆ ಮಾಡಲಾಗುವುದು ಎಂದೂ ರಿಲಯನ್ಸ್‌ ಇಂಡಸ್ಟ್ರೀಸ್‌ನ ವಾರ್ಷಿಕ ಮಹಾಸಭೆಯಲ್ಲಿ (Reliance AGM) ಮುಕೇಶ್‌ ಅಂಬಾನಿ ತಿಳಿಸಿದ್ದಾರೆ.

ರಿಲಯನ್ಸ್‌ ಇಂಡಸ್ಟ್ರೀಸ್‌ ವಿಶ್ವದ ಅತಿ ದೊಡ್ಡ ಪಾಲಿಸ್ಟರ್‌ ನೂಲು ಉತ್ಪಾದಕ ಘಟಕವನ್ನು ಹೊಂದಿದೆ. ಪಾಲಿಸ್ಟರ್‌ ಫಿಲಮೆಂಟ್‌ ಯಾರ್ನ್‌ ಮತ್ತು ಪಾಲಿಸ್ಟರ್‌ ಸ್ಟಾಪಲ್‌ ಫೈಬರ್‌ ಉದ್ದಿಮೆಗೆ ಮತ್ತಷ್ಟು ಹೂಡಿಕೆಯನ್ನೂ ಮಾಡಲಾಗುವುದು. ವಿಶ್ವದ ಅತಿ ದೊಡ್ಡ ಕಾರ್ಬನ್‌ ಫೈಬರ್‌ ಘಟಕಗಳಲ್ಲಿ ಒಂದನ್ನು ರಿಲಯನ್ಸ್‌ ಒಳಗೊಂಡಿದೆ ಎಂದು ಅಂಬಾನಿ ವಿವರಿಸಿದರು.

ಪರಿಸರಸ್ನೇಹಿ ಹಾಗೂ ನೈಸರ್ಗಿಕ ಮೂಲಗಳಿಂದ ವಿದ್ಯುತ್‌ ಉತ್ಪಾದನೆಗೂ ಜಾಮ್‌ ನಗರದಲ್ಲಿ ಧೀರೂಭಾಯಿ ಅಂಬಾನಿ ಗ್ರೀನ್‌ ಎನರ್ಜಿ ಕಾಂಪ್ಲೆಕ್ಸ್‌ ಅನ್ನು ನಿರ್ಮಿಸಲಾಗುತ್ತಿದೆ. ಇದು ೨೦೩೦ರ ವೇಳೆಗೆ ೧೦೦ ಗಿವಾವ್ಯಾಟ್‌ ಸೌರವಿದ್ಯುತ್‌ ಉತ್ಪಾದಿಸಲಿದೆ ಎಂದರು.

ಇದನ್ನೂ ಓದಿ:Reliance AGM | ರಿಲಯನ್ಸ್‌ನಿಂದ 1.88 ಲಕ್ಷ ಕೋಟಿ ರೂ. ತೆರಿಗೆ ಸಲ್ಲಿಕೆ, ದೇಶದಲ್ಲೇ ಗರಿಷ್ಠ

Exit mobile version