ಮುಂಬಯಿ: ಉತ್ತರಪ್ರದೇಶದಲ್ಲಿ ಮುಂದಿನ 4 ವರ್ಷಗಳಲ್ಲಿ 75,000 ಕೋಟಿ ರೂ. ಹೂಡಿಕೆ ಮಾಡುವುದಾಗಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಶುಕ್ರವಾರ ತಿಳಿಸಿದ್ದಾರೆ. (Reliance Industries) ರಾಜ್ಯದಲ್ಲಿ 2023ರ ಡಿಸೆಂಬರ್ ಅಂತ್ಯದ ವೇಳೆಗೆ 5ಜಿಯನ್ನು ರಿಲಯನ್ಸ್ ಜಿಯೊ ವಿಸ್ತರಿಸಲಿದೆ. ಟೆಲಿಕಾಂ ನೆಟ್ ವರ್ಕ್, ರಿಟೇಲ್, ಹೊಸ ಇಂಧನ ವಲಯದಲ್ಲಿ ಹೂಡಿಕೆ ಮಾಡಲಿದೆ ಎಂದು ವಿವರಿಸಿದರು. ಉತ್ತರಪ್ರದೇಶ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಮಾತನಾಡಿದ ಅವರು, ಈ ವಿಷಯ ತಿಳಿಸಿದರು.
ರಿಲಯನ್ಸ್ ಇಂಡಸ್ಟ್ರೀಸ್ ಉತ್ತರಪ್ರದೇಶದಲ್ಲಿ 10 ಗಿಗಾವ್ಯಾಟ್ ಸಾಮರ್ಥ್ಯದ ನವೀಕರಿಸಬಹುದಾದ ಇಂಧನ ಉತ್ಪಾದನೆ ಘಟಕ ಮತ್ತು ಜೈವಿಕ ಇಂಧನ ಬಿಸಿನೆಸ್ ಅನ್ನು ಆರಂಭಿಸಲಿದೆ ಎಂದರು. ಉತ್ತರಪ್ರದೇಶ ಜಾಗತಿಕ ಹೂಡಿಕೆದಾರರ ಸಮಾವೇಶ ಫೆಬ್ರವರಿ 10-12ರ ತನಕ ನಡೆಯುತ್ತಿದೆ.