Site icon Vistara News

Reliance Jio 5G Cities : 17 ರಾಜ್ಯಗಳ 50 ನಗರಗಳಲ್ಲಿ ರಿಲಯನ್ಸ್‌ ಜಿಯೊ 5ಜಿ ಬಿಡುಗಡೆ

oneplus and Jio

ಮುಂಬಯಿ: ರಿಲಯನ್ಸ್‌ ಜಿಯೊ 17 ರಾಜ್ಯಗಳ 50 ನಗರಗಳಲ್ಲಿ ಮಂಗಳವಾರದಿಂದ 5ಜಿ ಸೇವೆಗೆ (Reliance Jio 5G Cities) ಚಾಲನೆ ನೀಡಿದೆ.

ಇದರೊಂದಿಗೆ ಒಟ್ಟು 184 ನಗರಗಳಲ್ಲಿ ಜಿಯೊ 5ಜಿ ಸೇವೆ ವಿಸ್ತರಣೆಯಾದಂತಾಗಿದೆ. ಈ ಸಂದರ್ಭ ಗ್ರಾಹಕರಿಗೆ 1 Gbps ಸ್ಪೀಡ್‌ನಲ್ಲಿ ಅಮಿತ ಡೇಟಾ ಸೌಲಭ್ಯದ ಆಫರ್‌ ಅನ್ನು ನೀಡುತ್ತಿದೆ.

ಮೊದಲ ಬಾರಿಗೆ ಹೆಚ್ಚು ನಗರಗಳಲ್ಲಿ ರಿಲಯನ್ಸ್‌ ಜಿಯೊದ 5ಜಿ ಸೇವೆ ಲಭಿಸುತ್ತಿದೆ ಎಂದು ಕಂಪನಿ ತಿಳಿಸಿದೆ. ಹೊಸ ವರ್ಷ ಜಿಯೊದ ಗ್ರಾಹಕರು 5ಜಿ ಸೇವೆಯ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಜಿಯೊ ವಕ್ತಾರರು ತಿಳಿಸಿದ್ದಾರೆ. ಡಿಸೆಂಬರ್‌ ವೇಳೆಗೆ ಜಿಯೊದ ಎಲ್ಲ ಗ್ರಾಹಕರೂ ಪಡೆಯಬಹುದು ಎಂದಿದ್ದಾರೆ.

ಕರ್ನಾಟಕದ ಬಾಗಲಕೋಟ, ಚಿಕ್ಕಮಗಳೂರು, ಹಾಸನದಲ್ಲೂ ಜಿಯೊ 5ಜಿ ಸೇವೆ ಮಂಗಳವಾರದಿಂದ ಲಭ್ಯವಾಗುತ್ತಿದೆ ಎಂದು ಕಂಪನಿ ತಿಳಿಸಿದೆ.

Exit mobile version