ನವ ದೆಹಲಿ: ರಿಲಯನ್ಸ್ ಜಿಯೊ ಆಗಸ್ಟ್ ೧೫ರಂದು ತನ್ನ ೫ ಜಿ ಸೇವೆಯನ್ನು ಆರಂಭಿಸುವ ನಿರೀಕ್ಷೆ ಇದೆ.
ಇತ್ತೀಚೆಗೆ ರಿಲಯನ್ಸ್ ಜಿಯೊ ಇನ್ಫೋ ಕಾಮ್‌ನ ಅಧ್ಯಕ್ಷ ಆಕಾಶ್ ಅಂಬಾನಿ ಅವರು ೫ಜಿ ಸೇವೆಯೊಂದಿಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸಿಕೊಳ್ಳುವುದಾಗಿ ಹೇಳಿದ್ದರು.
“ಜಿಯೊ ವಿಶ್ವದರ್ಜೆಯ ಹಾಗೈ ಕೈಗೆಟಕುವ ದರದಲ್ಲಿ ೫ಜಿ ಸೇವೆಯನ್ನು ನೀಡಲಿದೆ. ಭಾರತದಲ್ಲಿ ಡಿಜಿಟಲ್ ಕ್ರಾಂತಿಗೆ ಇದು ಸಹಕಾರಿಯಾಗಲಿದೆ. ಮುಖ್ಯವಾಗಿ ಶಿಕ್ಷಣ, ಆರೋಗ್ಯ, ಉತ್ಪಾದನೆ, ಇ-ಆಡಳಿತಕ್ಕೆ ಇದು ಅತ್ಯಂತ ಪ್ರಯೋಜನವಾಗಲಿದೆʼʼ ಎಂದು ಆಕಾಶ್ ಅಂಬಾನಿ ಹೇಳಿದ್ದಾರೆ.
೫ಜಿ ಸ್ಪೆಕ್ಟ್ರಮ್ ಹರಾಜಿನಲ್ಲಿ ರಿಲಯನ್ಸ್ ಜಿಯೊ ೮೮,೦೭೮ ಕೋಟಿ ರೂ.ಗೆ ೨೪,೭೪೦ ಮೆಗಾಹರ್ಟ್ಸ್ ಸ್ಪೆಕ್ಟ್ರಮ್ ಅನ್ನು ಖರೀದಿಸಿದೆ. ಇದರೊಂದಿಗೆ ಅತಿ ದೊಡ್ಡ ಬಿಡ್ಡರ್ ಎನ್ನಿಸಿತ್ತು. ದುಬಾರಿಯಾದ ೭೦೦ ಮೆಗಾಹರ್ಟ್ಸ್ ಶ್ರೇಣಿಯ ಸ್ಪೆಕ್ಟ್ರಮ್ ಅನ್ನೂ ರಿಲಯನ್ಸ್ ಜಿಯೊ ಖರೀದಿಸಿರುವುದರಿಂದ ಮಾರುಕಟ್ಟೆಯಲ್ಲಿ ಅದಕ್ಕೆ ಇತರ ಕಂಪನಿಗಳಿಗಿಂತ ಹೆಚ್ಚು ಅನುಕೂಲವಾಗುವ ಸಾಧ್ಯತೆ ಇದೆ.
ಇದನ್ನೂ ಓದಿ:Airtel 5G| ಭಾರತದಲ್ಲಿ ಮೊದಲ ಬಾರಿಗೆ ಏರ್‌ಟೆಲ್‌ನಿಂದ ಇದೇ ತಿಂಗಳು 5ಜಿ ಸೇವೆ ಆರಂಭ