ನವ ದೆಹಲಿ: ರಿಲಯನ್ಸ್ ಸಮೂಹದ ಭಾಗವಾಗಿರುವ ರಿಲಯನ್ಸ್ ರಿಟೇಲ್, ( Reliance Retail ) ಮೆಟ್ರೊ ಕ್ಯಾಶ್ & ಕ್ಯಾರಿ ಇಂಡಿಯಾವನ್ನು ಖರೀದಿಸಲು ೫,೬೦೦ ಕೋಟಿ ರೂ.ಗಳ ಆರಂಭಿಕ ಪ್ರಸ್ತಾಪವನ್ನು ಮುಂದಿಟ್ಟಿದೆ.
ಥಾಯ್ಲೆಂಡ್‌ನ ಅತಿ ದೊಡ್ಡ ಕಂಪನಿ ಸಿಪಿ ಗ್ರೂಪ್ ೮,೦೦೦ ಕೋಟಿ ರೂ. ಆಫರ್ ಮುಂದಿಟ್ಟಿದೆ. ಆದರೆ ಜರ್ಮನಿ ಮೂಲದ ಮೆಟ್ರೊ ಎಜಿ ತನ್ನ ಭಾರತೀಯ ಘಟಕವನ್ನು ಸ್ಥಳೀಯ ಕಂಪನಿಗೇ ಮಾರಾಟ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಸ್ಥಳೀಯ ಕಂಪನಿಗೆ ಆದ್ಯತೆ ನೀಡಿದರೆ ಸಹಜವಾಗಿ ರಿಲಯನ್ಸ್ ಮೊದಲ ಆಯ್ಕೆಯಾಗುವ ನಿರೀಕ್ಷೆ ಇದೆ.
ಮೆಟ್ರೊ ೨೦೧೬ರ ತನಕ ಕೇವಲ ೧೮ ಮಳಿಗೆಗಳನ್ನು ಹೊಂದಿತ್ತು. ಇತ್ತೀಚಿನ ವರ್ಷಗಳಲ್ಲಿ ೧೩ ಹೊಸ ಸ್ಟೋರ್‌ಗಳನ್ನು ತೆರೆದಿತ್ತು. ೨೦೦೩ರಲ್ಲಿ ಮೆಟ್ರೊ ಭಾರತದಲ್ಲಿ ತನ್ನ ವಹಿವಾಟು ಆರಂಭಿಸಿತ್ತು.