Site icon Vistara News

MSME Sector : ಸಣ್ಣ ಉದ್ದಿಮೆಗಳಿಗೆ ರಿಲೀಫ್‌, ಕೋವಿಡ್‌ ಸಂದರ್ಭದ ದಂಡ ರಿಫಂಡ್‌ಗೆ ಸಚಿವಾಲಯಗಳಿಗೆ ಸೂಚನೆ

MSME

ನವ ದೆಹಲಿ: ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ (MSME Sector) ಕೇಂದ್ರ ಸರ್ಕಾರ ರಿಲೀಫ್‌ ಒಂದನ್ನು ನೀಡಿದ್ದು, ಕೋವಿಡ್‌ ಬಿಕ್ಕಟ್ಟಿನ ಸಂದರ್ಭ ಕೆಲವು ಒಪ್ಪಂದಗಳು, ನಿಯಮಾವಳಿಗಳ ಉಲ್ಲಂಘನೆಗಾಗಿ ಪಡೆದಿದ್ದ ದಂಡಗಳನ್ನು ( Forfeited Amount ) ರಿಫಂಡ್‌ ಮಾಡುವಂತೆ ಸಚಿವಾಲಯಗಳಿಗೆ ಸೂಚಿಸಿದೆ. ಎಂಎಸ್‌ಎಂಇಗಳ ಪರ್ಫಾಮೆನ್ಸ್‌ ಸೆಕ್ಯುರಿಟಿ, ಬಿಡ್‌ ಸೆಕ್ಯುರಿಟಿ, ಲಿಕ್ವಿಡೇಟೆಡ್‌ ಡ್ಯಾಮೇಜ್‌ಗಳಿಗೆ ಸಂಬಂಧಿಸಿ ವಸೂಲು ಮಾಡಲಾಗಿದ್ದ ದಂಡದ ಮೊತ್ತವನ್ನು ರಿಫಂಡ್‌ ಮಾಡಬೇಕು ಎಂದು ಸೋಮವಾರ ಸೂಚಿಸಲಾಗಿದೆ.

ವಿವಾದ್‌ ಸೇ ವಿಶ್ವಾಸ್‌ 1 ಅಭಿಯಾನದ ಭಾಗವಾಗಿ ಹಣಕಾಸು ಇಲಾಖೆಯು ಎಂಎಸ್‌ಎಂಇಗಳಿಗೆ ಈ ನೆರವನ್ನು ನೀಡಿದೆ. ಎಂಎಸ್‌ಎಂಇಗಳಿಂದ ಪಡೆದಿದ್ದ ಪರ್ಫಾಮೆನ್ಸ್‌ ಸೆಕ್ಯುರಿಟಿಯಲ್ಲಿ 95% ಮೊತ್ತವನ್ನು ರಿಫಂಡ್‌ ಮಾಡಲಾಗುವುದು. 95% ಬಿಡ್‌ ಸೆಕ್ಯುರಿಟಿಯನ್ನು ರಿಫಂಡ್‌ ಮಾಡಲಾಗುವುದು. ಲಿಕ್ವಿಡೇಟೆಡ್‌ ಡ್ಯಾಮೇಜ್‌ (Liquidated damages) ಬಾಬ್ತು ಕಡಿತಗೊಳಿಸಿದ್ದ ಮೊತ್ತದಲ್ಲಿ 95% ಮೊತ್ತವನ್ನು ರಿಫಂಡ್‌ ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ.

ಇಂಥ ಒಪ್ಪಂದಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕಂಪನಿಗಳನ್ನು ನಿಷೇಧಿಸಿದ್ದರೆ, ಅದನ್ನು ರದ್ದುಪಡಿಸಲಾಗುವುದು. ರಿಫಂಡ್‌ ಮೊತ್ತಕ್ಕೆ ಬಡ್ಡಿ ಮಾತ್ರ ಸಿಗುವುದಿಲ್ಲ. ಈ ಸಲದ ಬಜೆಟ್‌ನಲ್ಲಿ ಎಂಎಸ್‌ ಎಂಇಗಳಿಗೆ ರಿಲೀಫ್‌ ನೀಡಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

Exit mobile version