Site icon Vistara News

Retail Inflation : ಫೆಬ್ರವರಿಯಲ್ಲಿ ರಿಟೇಲ್‌ ಹಣದುಬ್ಬರ 6.44%ಕ್ಕೆ ಇಳಿಕೆ

Retail inflation

ನವ ದೆಹಲಿ: ಕಳೆದ ಫೆಬ್ರವರಿಯಲ್ಲಿ ನಿರೀಕ್ಷೆಯಂತೆ ರಿಟೇಲ್‌ ಹಣದುಬ್ಬರ (Retail Inflation) 6.44%ಕ್ಕೆ ಇಳಿಕೆಯಾಗಿದೆ. ಜನವರಿಯಲ್ಲಿ ಇದು 6.52% ಇತ್ತು. ಫೆಬ್ರವರಿಯಲ್ಲಿ ಧವಸ ಧಾನ್ಯಗಳು, ಹಾಲಿನ ಬೆಲೆ ಏರಿಕೆಯಾಗಿದ್ದರೂ, ಮಾರ್ಚ್‌ನಲ್ಲಿ ಇಳಿಮುಖವಾಗಿದೆ. ಉಡುಪುಗಳು ಮತ್ತು ಪಾದರಕ್ಷೆಗಳು, ಪರ್ಸನಲ್‌ ಕೇರ್‌ ಉತ್ಪನ್ನಗಳ ದರ ಏರುಗತಿಯಲ್ಲಿತ್ತು.

ಆರ್‌ಬಿಐ ಪ್ರಕಾರ ಹಣದುಬ್ಬರ ಗರಿಷ್ಠ 6% ಇರಬಹುದು. ಜನವರಿಯಲ್ಲಿ ರಿಟೇಲ್ ಹಣದುಬ್ಬರ‌ 6.52%ಕ್ಕೆ ಏರಿಕೆಯಾಗಿತ್ತು. ಡಿಸೆಂಬರ್‌ನಲ್ಲಿ 5.72% ಮತ್ತು ನವೆಂಬರ್‌ನಲ್ಲಿ 5.88% ನಷ್ಟಿತ್ತು. ಫೆಬ್ರವರಿಯಲ್ಲಿ ಗ್ರಾಮೀಣ ಹಣದುಬ್ಬರ 6.72% ಇತ್ತು. ನಗರ ಹಣದುಬ್ಬರ 6.10%ರಷ್ಟಿತ್ತು.

ಆರ್‌ಬಿಐ ಕಳೆದ ವರ್ಷ ಮೇನಿಂದ 2.50% ರಷ್ಟು ಬಡ್ಡಿ ದರ ಏರಿಸಿತ್ತು. ಈಗ ರೆಪೊ ದರ 6.50%ಕ್ಕೆ ಏರಿತ್ತು. ಇದರ ಪರಿಣಾಮ ಗೃಹ ಸಾಲದ ಬಡ್ಡಿ ದರಗಳು ಹೆಚ್ಚಳವಾಗಿದೆ.

Exit mobile version