ನವದೆಹಲಿ: ಕಳೆದ ಮೇನಲ್ಲಿ ರಿಟೇಲ್ ಹಣದುಬ್ಬರ 7.04%ಕ್ಕೆ ಇಳಿಕೆಯಾಗಿದೆ. ಏಪ್ರಿಲ್‌ನಲ್ಲಿ ಇದು 7.79%ಕ್ಕೆ ಏರಿಕೆಯಾಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಕೇಂದ್ರ ಸರಕಾರ ಪೆಟ್ರೋಲ್-ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿರುವುದು, ಆಹಾರ ವಸ್ತುಗಳ ದರಗಳು ಇಳಿಕೆಯಾಗುತ್ತಿರುವುದು ರಿಟೇಲ್ ಹಣದುಬ್ಬರ 7.04%ಕ್ಕೆ ತಗ್ಗಲು ಕಾರಣವಾಗಿದೆ. ಹೀಗಿದ್ದರೂ, ಆರ್‌ಬಿಐನ ಟಾರ್ಗೆಟ್ ಹಣದುಬ್ಬರವನ್ನು 2-6% ಒಳಗೆ ತರುವುದಾಗಿದೆ.
ಅಂತಾರಾಷ್ಟ್ರೀಯ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್‌ಗೆ 120 ಡಾಲರ್‌ಗಳ ಉನ್ನತ ಮಟ್ಟಕ್ಕೆ ಏರಿಕೆಯಾಗಿರುವುದರಿಂದ ಹಣದುಬ್ಬರ ನಿಯಂತ್ರಿಸಲು ಭಾರಿ ಸವಾಲಾಗಿತ್ತು. ಆರ್‌ಬಿಐ ಮುಂದಿನ ಎರಡು ತ್ರೈಮಾಸಿಕಗಳಲ್ಲಿ ಬಡ್ಡಿದರದಲ್ಲಿ ಶೇ.0.35 ಮತ್ತು ಶೇ. 0.25ರಷ್ಟು ಹೆಚ್ಚಳ ಮಾಡುವ ಸಾಧ್ಯತೆ ಇದೆ.
ಆರ್‌ಬಿಐ ರೆಪೊ ದರವನ್ನು ಕಳೆದ ವಾರ ಅರ್ಧ ಪರ್ಸೆಂಟ್ ಏರಿಸಿತ್ತು. ಅಂದರೆ 6.7%ಕ್ಕೆ ವೃದ್ಧಿಸಿತ್ತು.
ರಿಟೇಲ್ ಹಣದುಬ್ಬರ ಇಳಿಕೆ ಹೀಗೆ
ಜನವರಿ | 6.01 % |
ಫೆಬ್ರವರಿ | 6.07 % |
ಮಾರ್ಚ್ | 6.95 % |
ಏಪ್ರಿಲ್ | 7.79 % |
ಮೇ | 7.04 % |