Site icon Vistara News

ಚಿಲ್ಲರೆ ಹಣದುಬ್ಬರ ಜೂನ್‌ನಲ್ಲಿ 7.1%ಕ್ಕೆ ಅಲ್ಪ ಇಳಿಕೆ, ಈಗಲೂ ಅಪಾಯಕಾರಿ ಮಟ್ಟ

Retail Inflation

ನವ ದೆಹಲಿ: ಭಾರತದಲ್ಲಿ ಕಳೆದ ಜೂನ್‌ನಲ್ಲಿ ಚಿಲ್ಲರೆ ಹಣದುಬ್ಬರ (Retail Inflation) ೭.೦೧%ಕ್ಕೆ ಇಳಿಕೆಯಾಗಿದೆ. ಮೇನಲ್ಲಿ ೭.೦೪% ಇತ್ತು. ಹೀಗಿದ್ದರೂ, ಆರ್‌ಬಿಐ ಸೂಚಿಸಿರುವ ಸುರಕ್ಷತೆಯ ಮಟ್ಟವನ್ನು ಈಗಲೂ ಮೀರಿದೆ.

ಆರ್‌ಬಿಐ ಪ್ರಕಾರ ಚಿಲ್ಲರೆ ಹಣದುಬ್ಬರ ೪%ಕ್ಕಿಂತ ೨% ಹೆಚ್ಚು ಅಥವಾ ಕಡಿಮೆ ಇರಬಹುದು. ಅಂದರೆ ಗರಿಷ್ಠ ೬% ಹಾಗೂ ಕನಿಷ್ಠ ೨%ರ ತನಕ ಇರಬಹುದು. ಈ ಲೆಕ್ಕಾಚಾರದಲ್ಲಿ ಕಳೆದ ೬ ತಿಂಗಳುಗಳಿಂದ ಚಿಲ್ಲರೆ ಹಣದುಬ್ಬರವು ಆರ್‌ಬಿಐನ ಸಹಿಷ್ಣುತೆಯ ಮಟ್ಟಕ್ಕಿಂತ ಮೇಲಿದೆ. ಹೀಗಿದ್ದರೂ ಸತತ ಎರಡನೇ ತಿಂಗಳಿಗೆ ಹಣದುಬ್ಬರ ಅಲ್ಪ ಇಳಿಕೆಯನ್ನು ದಾಖಲಿಸಿದೆ.

ರಿಟೇಲ್‌ ಹಣದುಬ್ಬರದ ಟ್ರೆಂಡ್‌

ಏಪ್ರಿಲ್‌7.79%
ಮೇ7.04
ಜೂನ್‌7.01

ಆಹಾರ ಹಣದುಬ್ಬರ ಕಳೆದ ಮೇನಲ್ಲಿ ೭.೯೭% ಹಾಗೂ ಜೂನ್‌ನಲ್ಲಿ ೭.೭೫% ಇತ್ತು. ರಾಷ್ಟ್ರೀಯ ಅಂಕಿ ಅಂಶಗಳ ಕಚೇರಿಯ ಅಂಕಿ ಅಂಶಗಳ ಪ್ರಕಾರ ತರಕಾರಿಗಳ ಬೆಲೆ ಏರಿಕೆಯ ಪ್ರಮಾಣ ೧೮.೨೬%ಯಿಂದ ೧೭.೩೭%ಕ್ಕೆ ಇಳಿಕೆಯಾಗಿದೆ. ಆಹಾರ ಧಾನ್ಯಗಳ ಬೆಲೆಯೂ ತಗ್ಗಿದೆ.

ರೂಪಾಯಿ ಮೌಲ್ಯ ಕುಸಿತ ಎಫೆಕ್ಟ್

ಜಾಗತಿಕ ಮಟ್ಟದಲ್ಲಿ ಸರಕುಗಳ ದರದಲ್ಲಿ ಅಲ್ಪ ಇಳಿಕೆಯಾಗಿದೆ. ಹೀಗಿದ್ದರೂ, ಡಾಲರ್‌ ಎದುರು ರೂಪಾಯಿ ದುರ್ಬಲವಾಗಿರುವುದರಿಂದ ಆಮದು ವೆಚ್ಚ ದುಬಾರಿಯಾಗಿದೆ. ಇದು ಹಣದುಬ್ಬದ ಇಳಿಕೆಗೆ ಸವಾಲಾಗಿ ಪರಿಣಮಿಸಿದೆ ಎನ್ನುತ್ತಾರೆ ತಜ್ಞರು.

Exit mobile version