Site icon Vistara News

Retail Inflation: ಮೂರು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆಯಾದ ಚಿಲ್ಲರೆ ಹಣದುಬ್ಬರ!

Retail Inflation reduced to 4.87 percent Says Government report

ನವದೆಹಲಿ: ಪ್ರಸಕ್ತ ವರ್ಷದ ಸೆಪ್ಟೆಂಬರ್‌ನಲ್ಲಿ ದೇಶದ ಚಿಲ್ಲರೆ ಹಣದುಬ್ಬರವು (Retail Inflation) ಮೂರು ತಿಂಗಳ ಕನಿಷ್ಠ ಶೇ.5.02ಕ್ಕೆ ಮಟ್ಟಕ್ಕೆ ಇಳಿಕೆಯಾಗಿದೆ. ಆಹಾರ ಬೆಲೆ (Food Price) ಇಳಿಕೆಯೇ ಇದಕ್ಕೆ ಮುಖ್ಯ ಕಾರಣವಾಗಿದೆ ಎಂಬ ಮಾಹಿತಿಯನ್ನು ಗುರುವಾರ ಬಿಡುಗಡೆ ಮಾಡಲಾದ ವರದಿಯಲ್ಲಿ ತಿಳಿಸಲಾಗಿದೆ. ಸಿಪಿಐ (Consumer Price Index) ಹಣದುಬ್ಬರವು ಎರಡು ತಿಂಗಳ ಅಂತರದ ನಂತರ ಆರ್‌ಬಿಐನ ಆರಾಮದಾಯಕ ಮಟ್ಟವಾದ ಶೇ.6ಕ್ಕೆ ಇಳಿಕೆಯಾಗಿರುವುದು ಸಕಾರಾತ್ಮಕ ಬೆಳವಣಿಗೆಯಾಗಿದೆ. ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧರಿಸಿದ ಹಣದುಬ್ಬರವು, 2022ರ ಆಗಸ್ಟ್‌ನಲ್ಲಿ ಶೇ.6.83 ಶೇಕಡಾ ಮತ್ತು ಸೆಪ್ಟೆಂಬರ್ ಶೇ.7.41 ರಷ್ಟಿತ್ತು.

ಕಳೆದ ವರ್ಷ ಜೂನ್ ತಿಂಗಳಲ್ಲಿ ಅತಿ ಕಡಿಮೆ(ಶೇ.4.87) ಹಣದುಬ್ಬರ ದಾಖಲಾಗಿತ್ತು. ರಾಷ್ಟ್ರೀಯ ಅಂಕಿಅಂಶ ಕಚೇರಿ (ಎನ್‌ಎಸ್‌ಒ) ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಆಹಾರ ಹಣದುಬ್ಬರವು ಸೆಪ್ಟೆಂಬರ್‌ನಲ್ಲಿ ಶೇ.9.94 ರಿಂದ ಶೇ.6.56ಕ್ಕೆ ಇಳಿದಿದೆ.

ಈ ಸುದ್ದಿಯನ್ನೂ ಓದಿ: Intrest Rate : ಸಾಲಗಾರರಿಗೆ ಗುಡ್​ ನ್ಯೂಸ್​; ಹಣದುಬ್ಬರದ ನಡುವೆಯೂ ಬಡ್ಡಿ ಏರಿಕೆ ಸಾಧ್ಯತೆಯಿಲ್ಲ

ಅಲ್ಲದೇ, ಗುರುವಾರ ಬಿಡುಗಡೆಯಾದ ಅಧಿಕೃತ ಅಂಕಿಅಂಶಗಳ ಪ್ರಕಾರ ಭಾರತದ ಕೈಗಾರಿಕಾ ಉತ್ಪಾದನೆಯು ಆಗಸ್ಟ್‌ನಲ್ಲಿ ಶೇಕಡಾ 10.3 ರಷ್ಟು ಹೆಚ್ಚಾಗಿದೆ. ಕೈಗಾರಿಕಾ ಉತ್ಪಾದನೆಯ ಸೂಚ್ಯಂಕದಲ್ಲಿ (IIP) ಮಾಪನ ಮಾಡಲಾದ ಕಾರ್ಖಾನೆಯ ಉತ್ಪಾದನೆಯು ಆಗಸ್ಟ್ 2022 ರಲ್ಲಿ ಶೇಕಡಾ 0.7 ರಷ್ಟು ಸಂಕುಚಿತಗೊಂಡಿದೆ.

ರಾಷ್ಟ್ರೀಯ ಅಂಕಿಅಂಶ ಕಚೇರಿ (NSO) ಬಿಡುಗಡೆ ಮಾಡಿದ ಮಾಹಿತಿಯು 2023ರ ಆಗಸ್ಟ್ ತಿಂಗಳಲ್ಲಿ ಉತ್ಪಾದನಾ ವಲಯದ ಉತ್ಪಾದನೆಯು 9.3 ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ಹೇಳಿದೆ. ಗಣಿಗಾರಿಕೆ ಉತ್ಪಾದನೆಯು 12.3 ಶೇಕಡಾ ಏರಿಕೆಯಾಗಿದೆ. ಆಗಸ್ಟ್ ತಿಂಗಳಲ್ಲಿ ವಿದ್ಯುತ್ ಉತ್ಪಾದನೆಯು ಶೇಕಡಾ 15.3 ರಷ್ಟು ಬೆಳವಣಿಗೆ ಕಂಡಿದೆ. 2022-23 ರ ಅದೇ ಅವಧಿಯಲ್ಲಿ ಶೇಕಡಾ 7.7 ಕ್ಕೆ ಹೋಲಿಸಿದರೆ 2023 ರ ಏಪ್ರಿಲ್-ಆಗಸ್ಟ್‌ನಲ್ಲಿ ಐಐಪಿ ಶೇ.6.1 ರಷ್ಟು ಹೆಚ್ಚಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ವಾಣಿಜ್ಯದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version