ಮುಂಬೈ: ಚಿಲ್ಲರೆ ಹಣದುಬ್ಬರವು (Retail inflation) ನಾಲ್ಕು ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ. 2023ರ ಡಿಸೆಂಬರ್ ತಿಂಗಳಲ್ಲಿ ಶೇ.5.9ಕ್ಕೆ ಏರಿಕೆಯಾಗಿದೆ ಎಂದು ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಇಲಾಖೆಯ ರಾಷ್ಟ್ರೀಯ ಅಂಕಿ ಅಂಶ ಕಚೇರಿ(National Statistical Office) ಶುಕ್ರವಾರ ತಿಳಿಸಿದೆ. ಗ್ರಾಹಕ ಬೆಲೆ ಸೂಚ್ಯಂಕ ಹಣದುಬ್ಬರವು (CPI-inflation) ನವೆಂಬರ್‌ನಲ್ಲಿ ಶೇ.5.5ರಿಂದ ಏರಿಕೆಯಾಗಿದ್ದು, ಭಾರತೀಯ ರಿಸರ್ವ್ ಬ್ಯಾಂಕ್ (RBI) ಸಹಿಷ್ಣುತೆಯ ಶ್ರೇಣಿಯ ಶೇ.2-6ಕ್ಕೆ ಹತ್ತಿರದಲ್ಲಿದೆ.
ಪ್ರಮುಖ ಚಿಲ್ಲರೆ ಹಣದುಬ್ಬರವು ಈಗ ಭಾರತೀಯ ರಿಸರ್ವ್ ಬ್ಯಾಂಕ್ ಮಧ್ಯಮಾವಧಿಯ ಗುರಿಯಾದ ಶೇ.4ಕ್ಕಿಂತ ಹೆಚ್ಚು ಸತತ 51 ತಿಂಗಳುಗಳಿಂದ ಇದೆ. ಆದಾಗ್ಯೂ, ಇದು ಸತತ ಎರಡನೇ ತಿಂಗಳ ಅಂದಾಜುಗಳಿಗಿಂತಲೂ ಕಡಿಮೆಯೇ ಆಗಿದೆ. ಏತನ್ಮಧ್ಯೆ, ದೀಪಾವಳಿಯ ಕಾರಣದಿಂದಾಗಿ ಕಡಿಮೆ ಕೆಲಸದ ದಿನಗಳು ಉತ್ಪಾದನೆಯ ಮೇಲೆ ಪರಿಣಾಮ ಬೀರಿದ್ದು, ಅಕ್ಟೋಬರ್ ತಿಂಗಳ ಗರಿಷ್ಠ ಶೇಕಡಾ 11.6 ರಿಂದ ನವೆಂಬರ್‌ನಲ್ಲಿ ಭಾರತದ ಕೈಗಾರಿಕಾ ಉತ್ಪಾದನೆಯ ಬೆಳವಣಿಗೆಯು 2.4 ಶೇಕಡಾಕ್ಕೆ ಕುಸಿದಿದೆ.
ಅಲ್ಲದೆ, ಶೇ.2.4 ಕೈಗಾರಿಕಾ ಉತ್ಪಾದನೆಯ ಸೂಚ್ಯಂಕ (ಐಐಪಿ)ದ ಪ್ರಕಾರ ಇತ್ತೀಚಿನ ಕೈಗಾರಿಕಾ ಬೆಳವಣಿಗೆಯ ಅಂಕಿಅಂಶವು ಎಂಟು ತಿಂಗಳಲ್ಲೇ ಅತ್ಯಂತ ಕಡಿಮೆಯಾಗಿದೆ. ಇದು ಅರ್ಥಶಾಸ್ತ್ರಜ್ಞರ ನಿರೀಕ್ಷೆಗಿಂತ 3.5 ಶೇಕಡಾಕ್ಕಿಂತ ಕಡಿಮೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. 2022ರ ನವೆಂಬರ್ ತಿಂಗಳಲ್ಲಿ ಭಾರತದ ಕೈಗಾರಿಕಾ ಉತ್ಪಾದನೆಯು ಶೇಕಡಾ 7.6 ರಷ್ಟು ಬೆಳೆದಿದೆ.
2023ರ ಏಪ್ರಿಲ್-ನವೆಂಬರ್‌ಗೆ ಮೊದಲ ಎಂಟು ತಿಂಗಳಲ್ಲಿ ಐಐಪಿ ಬೆಳವಣಿಗೆಯು 5.6 ಪ್ರತಿಶತಕ್ಕೆ ಬದಲಾಗಿ ಶೇ. 6.4ರಷ್ಟಿದೆ. ಡಿಸೆಂಬರ್ ಉತ್ಪಾದನಾ ವಲಯದ ಕಾರಣದಿಂದಾಗಿ ಬೆಳವಣಿಗೆಯು ಕುಂಠಿತವಾಗಿದೆ. ಇದು ಅಕ್ಟೋಬರ್‌ನಲ್ಲಿ 10.2 ರಷ್ಟು ಹೆಚ್ಚಳವನ್ನು ದಾಖಲಿಸಿದ ನಂತರ ವರ್ಷದಿಂದ ವರ್ಷಕ್ಕೆ ಅದರ ಉತ್ಪಾದನೆಯು ಕೇವಲ ಶೇ.1.2 ಹೆಚ್ಚಳವನ್ನು ಕಂಡಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಈ ಸುದ್ದಿಯನ್ನೂ ಓದಿ: Inflation : ಹಣದುಬ್ಬರ ಎಂದರೇನು? ಕಾರಣವೇನು?