ನವ ದೆಹಲಿ: ಭಾರತದಲ್ಲಿ ರಿಟೇಲ್ ಹಣದುಬ್ಬರ (Retail inflation) ಕಳೆದ ಎರಡು ವರ್ಷದಲ್ಲಿಯೇ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ. ಇದು ಮೇನಲ್ಲಿ 4.25%ಕ್ಕೆ ತಗ್ಗಿದೆ ಎಂದು ಅಂಕಿ ಅಂಶಗಳು ತಿಳಿಸಿವೆ. ಗ್ರಾಹಕ ದರ ಸೂಚ್ಯಂಕ (consumer price index) ಆಧರಿತ ಹಣದುಬ್ಬರ ಆರ್‌ಬಿಐನ ಸಹಿಷ್ಣುತೆಯ ಮಟ್ಟದಲ್ಲಿ, ಅಂದರೆ 2-6% ಒಳಗೆಯೇ ಇದೆ ಎಂದು ಸೋಮವಾರ ಬಿಡುಗಡೆಯಾಗಿರುವ ಅಂಕಿ ಅಂಶಗಳು ತಿಳಿಸಿವೆ.
ಮೇನಲ್ಲಿ ಗ್ರಾಹಕ ಆಹಾರ ದರ ಸೂಚ್ಯಂಕ (consumer food price index) 2.91%ಕ್ಕೆ ಇಳಿಕೆಯಾಗಿತ್ತು. ಇದು ಏಪ್ರಿಲ್‌ನಲ್ಲಿ 3.84% ಇತ್ತು. ಗ್ರಾಮೀಣ ಹಣದುಬ್ಬರ 4.17% ಇದ್ದರೆ, ನಗರ ಪ್ರದೇಶದ ಹಣದುಬ್ಬರ 4.27% ಇತ್ತು.
ಕಳೆದ ಮೇನಲ್ಲಿ ತರಕಾರಿಗಳ ಬೆಲೆಯಲ್ಲಿ 8.1% ಇಳಿಕೆಯಾಗಿತ್ತು. ಆಹಾರ ಮತ್ತು ಪಾನೀಯಗಳ ದರ 3.29% ಇಳಿದಿತ್ತು. ಧವಸ ಧಾನ್ಯಗಳ ದರದಲ್ಲೂ ಇಳಿಕೆ ಉಂಟಾಗಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಲ್ಪಿಜಿ, ಇತರ ಇಂಧನ ದರ ಇಳಿಕೆ ಕೂಡ ಸಕಾರಾತ್ಮಕ ಪ್ರಭಾವ ಬೀರಿತ್ತು. ಹೀಗಿದ್ದರೂ, ಎಲ್‌ನಿನೊ ಎಫೆಕ್ಟ್, ಮುಂಗಾರು ಕೊರತಯ ಸವಾಲು ಕಾಡಿದರೆ, ಹಣದುಬ್ಬರ ಮತ್ತೆ ಏರಿಕೆಯಾಗುವ ಆತಂಕ ಇದೆ.
🚨 India Inflation in 2023.
— Indian Tech & Infra (@IndianTechGuide) June 12, 2023
January – 6.52%
February – 6.44%
March – 5.66%
April – 4.7%
May – 4.25%
ಕಳೆದ ಏಪ್ರಿಲ್‌ನಲ್ಲಿ ರಿಟೇಲ್ ಹಣದುಬ್ಬರ 4.7%ಕ್ಕೆ ಇಳಿಕೆಯಾಗಿದೆ. ಮಾರ್ಚ್‌ನಲ್ಲಿ ಇದು 5.66% ಇತ್ತು ಎಂದು ಶುಕ್ರವಾರ ಸರ್ಕಾರ ಬಿಡುಗಡೆಗೊಳಿಸಿದ ಅಂಕಿ ಅಂಶಗಳು ತಿಳಿಸಿವೆ. ಸತತ ಎರಡನೇ ತಿಂಗಳಿಗೆ ಗ್ರಾಹಕ ದರ ಆಧರಿತ ಹಣದುಬ್ಬರ (Consumer Price Index) ಆರ್‌ಬಿಐನ ಸುರಕ್ಷತೆಯ ಮಟ್ಟದ ಮಿತಿಯೊಳಗೆ ಬಂದಿದೆ.
ಆರ್‌ಬಿಐ ಪ್ರಕಾರ ಹಣದುಬ್ಬರ ಗರಿಷ್ಠ 6% ಇರಬಹುದು. ಆಹಾರ ವಸ್ತುಗಳ ದರ ಇಳಿಕೆಯ ಪರಿಣಾಮ ಚಿಲ್ಲರೆ ಹಣದುಬ್ಬರ ಕಳೆದ 18 ತಿಂಗಳಿನಲ್ಲಿಯೇ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿತ್ತು. 2021ರ ಅಕ್ಟೋಬರ್‌ನಲ್ಲಿ ರಿಟೇಲ್ ಹಣದುಬ್ಬರ 4.48% ಇತ್ತು.
ಮಾರ್ಚ್‌ನಲ್ಲಿ ಕಾರ್ಖಾನೆಗಳಲ್ಲಿ ಉತ್ಪಾದನೆ 1.1% ಏರಿಕೆಯಾಗಿತ್ತು. ಇದನ್ನು ಕೈಗಾರಿಕಾ ಉತ್ಪಾದನೆ ಸೂಚ್ಯಂಕ ಐಐಪಿ 2022ರ ಮಾರ್ಚ್‌ನಲ್ಲಿ 2.2% ಏರಿತ್ತು. ನ್ಯಾಶನಲ್ ಸ್ಟಾಟಿಸ್ಟಿಕಲ್ ಆಫೀಸ್ (National statistical office) ಈ ವರದಿ ಬಿಡುಗಡೆಗೊಳಿಸಿದೆ. ಮಾರ್ಚ್‌ನಲ್ಲಿ ಗಣಿಗಾರಿಕೆಯ ಉತ್ಪಾದನೆ 6.8% ಏರಿಕೆಯಾಗಿತ್ತು. ವಿದ್ಯುತ್ ಉತ್ಪಾದನೆ 1.6% ಇಳಿಕೆಯಾಗಿತ್ತು.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರಿಟೇಲ್ ಹಣದುಬ್ಬರವನ್ನು 2-6% ರ ಶ್ರೇಣಿಯಲ್ಲಿ ಉಳಿಸಿಕೊಳ್ಳುವ ಪ್ರಮುಖ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ಪೂರೈಕೆಯ ಸರಣಿಯಲ್ಲಿ ಅಡಚಣೆ ಉಂಟಾಗಿದ್ದರಿಂದ ಹಣದುಬ್ಬರ ಏರಿತ್ತು. ಇದನ್ನು ಹತೋಟಿಗೆ ತರಲು ಆರ್‌ಬಿಐ ಬಡ್ಡಿ ದರವನ್ನು ಏರಿಸಿತ್ತು. ಇದೀಗ ರಿಟೇಲ್ ಹಣದುಬ್ಬರ ತಗ್ಗಿರುವುದರಿಂದ ಬಡ್ಡಿ ದರ ಇಳಿಕೆಗೆ ಹಾದಿ ಸುಗಮವಾಗುತ್ತಿದೆ. ಆರ್‌ಬಿಐ ಅಂದಾಜಿನ ಪ್ರಕಾರ 2023-24ರಲ್ಲಿ ರಿಟೇಲ್ ಹಣದುಬ್ಬರ ಸರಾಸರಿ 5.1% ರಲ್ಲಿ ಇರಬಹುದು. ತಜ್ಞರ ಪ್ರಕಾರ 2023ರ ಅಂತ್ಯ ಅಥವಾ 2024ರ ಆರಂಭದಲ್ಲಿ ಬಡ್ಡಿ ದರಗಳು ಇಳಿಕೆಯಾಗಲಿವೆ. ಜಾಗತಿಕ ಮಟ್ಟದಲ್ಲಿ ಬಡ್ಡಿ ದರಗಳು ಇಳಿಕೆಯಾದರೆ, ಆರ್‌ಬಿಐ ಅದನ್ನು
ಇದನ್ನೂ ಓದಿ: Retail inflation : ಬಿಗ್ ರಿಲೀಫ್, ರಿಟೇಲ್ ಹಣದುಬ್ಬರ ಏಪ್ರಿಲ್‌ನಲ್ಲಿ 4.7%ಕ್ಕೆ ಇಳಿಕೆ, ಕಾರಣವೇನು?