ನವ ದೆಹಲಿ: ಕಳೆದ ಏಪ್ರಿಲ್‌ನಲ್ಲಿ ರಿಟೇಲ್ ಹಣದುಬ್ಬರ 4.7%ಕ್ಕೆ ಇಳಿಕೆಯಾಗಿದೆ. ಮಾರ್ಚ್‌ನಲ್ಲಿ ಇದು 5.66% ಇತ್ತು ಎಂದು ಶುಕ್ರವಾರ ಸರ್ಕಾರ ಬಿಡುಗಡೆಗೊಳಿಸಿದ ಅಂಕಿ ಅಂಶಗಳು ತಿಳಿಸಿವೆ. ಸತತ ಎರಡನೇ ತಿಂಗಳಿಗೆ ಗ್ರಾಹಕ ದರ ಆಧರಿತ ಹಣದುಬ್ಬರ (Consumer Price Index) ಆರ್‌ಬಿಐನ ಸುರಕ್ಷತೆಯ ಮಟ್ಟದ ಮಿತಿಯೊಳಗೆ ಬಂದಿದೆ.
ಆರ್‌ಬಿಐ ಪ್ರಕಾರ ಹಣದುಬ್ಬರ ಗರಿಷ್ಠ 6% ಇರಬಹುದು. ಆಹಾರ ವಸ್ತುಗಳ ದರ ಇಳಿಕೆಯ ಪರಿಣಾಮ ಚಿಲ್ಲರೆ ಹಣದುಬ್ಬರ ಕಳೆದ 18 ತಿಂಗಳಿನಲ್ಲಿಯೇ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿತ್ತು. 2021ರ ಅಕ್ಟೋಬರ್‌ನಲ್ಲಿ ರಿಟೇಲ್ ಹಣದುಬ್ಬರ 4.48% ಇತ್ತು.
ಇದನ್ನೂ ಓದಿ: Retail inflation : ಮಾರ್ಚ್‌ನಲ್ಲಿ ಚಿಲ್ಲರೆ ಹಣದುಬ್ಬರ 5.66%ಕ್ಕೆ ಇಳಿಕೆ
ಮಾರ್ಚ್‌ನಲ್ಲಿ ಕಾರ್ಖಾನೆಗಳಲ್ಲಿ ಉತ್ಪಾದನೆ 1.1% ಏರಿಕೆಯಾಗಿತ್ತು. ಇದನ್ನು ಕೈಗಾರಿಕಾ ಉತ್ಪಾದನೆ ಸೂಚ್ಯಂಕ ಐಐಪಿ 2022ರ ಮಾರ್ಚ್‌ನಲ್ಲಿ 2.2% ಏರಿತ್ತು. ನ್ಯಾಶನಲ್ ಸ್ಟಾಟಿಸ್ಟಿಕಲ್ ಆಫೀಸ್ (National statistical office) ಈ ವರದಿ ಬಿಡುಗಡೆಗೊಳಿಸಿದೆ. ಮಾರ್ಚ್‌ನಲ್ಲಿ ಗಣಿಗಾರಿಕೆಯ ಉತ್ಪಾದನೆ 6.8% ಏರಿಕೆಯಾಗಿತ್ತು. ವಿದ್ಯುತ್ ಉತ್ಪಾದನೆ 1.6% ಇಳಿಕೆಯಾಗಿತ್ತು.
ಕಳೆದ ಏಪ್ರಿಲ್‌ನಲ್ಲಿ ಆಹಾರ ಹಣದುಬ್ಬರ 3.84%ಕ್ಕೆ ಇಳಿಕೆಯಾಗಿತ್ತು. ಆದರೆ ಇದು ಮಾರ್ಚ್‌ನಲ್ಲಿ 8.31% ರ ಉನ್ನತ ಮಟ್ಟದಲ್ಲಿ ಇತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ 8.31% ಇತ್ತು.
ಚಿಲ್ಲರೆ ಹಣದುಬ್ಬರವು 2022ರ ಡಿಸೆಂಬರ್‌ನಲ್ಲಿ 5.7% ಇತ್ತು. 2023ರ ಫೆಬ್ರವರಿಯಲ್ಲಿ 6.4%ಕ್ಕೆ ಏರಿತ್ತು. ಬೇಳೆ ಕಾಳುಗಳು, ಹಾಲು, ಹಣ್ಣುಹಂಪಲುಗಳ ದರ ಕಾರಣವಾಗಿತ್ತು. ಬಳಿಕ ಮಾರ್ಚ್, ಏಪ್ರಿಲ್‌ನಲ್ಲಿ ರಿಟೇಲ್ ಹಣದುಬ್ಬರ ಇಳಿದಿರುವುದನ್ನು ಗಮನಿಸಬಹುದು.