ನವ ದೆಹಲಿ: ಭಾರತದ ಚಿಲ್ಲರೆ ಹಣದುಬ್ಬರ ಕಳೆದ ಆಗಸ್ಟ್‌ನಲ್ಲಿ 7%ಕ್ಕೆ ಏರಿಕೆಯಾಗಿದೆ. ಜುಲೈನಲ್ಲಿ 6.71% ಇತ್ತು. ಇದರೊಂದಿಗೆ ಸತತ ಎಂಟು ತಿಂಗಳಿನಿಂದ ರಿಟೇಲ್ ಹಣದುಬ್ಬರ (Retail Inflation) ಆರ್‌ಬಿಐನ ಸುರಕ್ಷತಾ ಮಟ್ಟಕ್ಕಿಂತ (2-6%) ಮೇಲಿದೆ.
ಆಹಾರ ಹಣದುಬ್ಬರ ಕೂಡ 2022ರ ಆಗಸ್ಟ್‌ನಲ್ಲಿ 7.62%ಕ್ಕೆ ಏರಿಕೆಯಾಗಿದೆ. ಜುಲೈನಲ್ಲಿ 6.75% ಇತ್ತು. ಆಗಸ್ಟ್‌ನಲ್ಲಿ ತರಕಾರಿಗಳ ಬೆಲೆಗಳಲ್ಲಿ 13.23% ಹೆಚ್ಚಳವಾಗಿದೆ. ಆಹಾರ, ತರಕಾರಿಗಳ ಬೆಲೆ ಏರಿಕೆಯ ಪರಿಣಾಮ ರಿಟೇಲ್ ಹಣದುಬ್ಬರ ಕೂಡ ಜಿಗಿದಿದೆ.
2022ರಲ್ಲಿ ಚಿಲ್ಲರೆ ಹಣದುಬ್ಬರ
ಜನವರಿ | 6.1% |
ಫೆಬ್ರವರಿ | 6.07% |
ಮಾರ್ಚ್ | 7.95% |
ಏಪ್ರಿಲ್ | 7.79% |
ಮೇ | 7.04% |
ಜೂನ್ | 7.01% |
ಜುಲೈ | 6.71% |
ಆಗಸ್ಟ್ | 7% |
ಆಹಾರ ವಸ್ತುಗಳ ದರ ಹೆಚ್ಚಳ ಹೀಗೆ:
- ಮಸಾಲೆ ಪದಾರ್ಥಗಳು: 14.90%
- ತರಕಾರಿಗಳು : 13.23%
- ಇಂಧನ : 10.78%
- ಬಟ್ಟೆಬರೆ & ಪಾದರಕ್ಷೆ : 9.91%
- ಆಹಾರ ಮತ್ತು ಪಾನೀಯ: 7.57%
- ಹಣ್ಣುಗಳು: 7.39%
- ಗೃಹೋಪಯೋಗಿ ವಸ್ತುಗಳು: 7.53%
- ಪರ್ಸನಲ್ ಕೇರ್ ವಸ್ತುಗಳು : 7%
- ಹಾಲು ಮತ್ತು ಹಾಲಿನ ಉತ್ಪನ್ನಗಳು: 6.39%
- ಹೌಸಿಂಗ್: 4.06%
- ಆಹಾರ ಧಾನ್ಯ, ಬೇಲೆಕಾಳು : 2.52%
- ಮಾಂಸ &ಮೀನು: 0.98%
- ಮೊಟ್ಟೆ : -4.56% (ಇಳಿಕೆ)
ಸರ್ಕಾರ ಆಹಾರ ಹಣದುಬ್ಬರವನ್ನು ತಗ್ಗಿಸಲು ಅಕ್ಕಿ, ಗೋಧಿ, ಸಕ್ಕರೆ ರಫ್ತಿಗೆ ನಿರ್ಬಂಧಗಳನ್ನು ವಿಧಿಸಿದೆ. ದೇಶದ ಕೆಲವು ಕಡೆಗಳಲ್ಲಿ ಮಳೆಯ ಕೊರತೆಯಾಗಿದ್ದರೆ, ಹಲವು ಕಡೆಗಳಲ್ಲಿ ಅತಿ ವೃಷ್ಠಿಯಿಂದಲೂ ಸಮಸ್ಯೆಯಾಗಿದೆ. ಇದು ಆಹಾರ ವಸ್ತುಗಳ ದರ ಏರಿಕೆಗೆ ಕಾರಣವಾಗಬಹುದು ಎಂಬ ಆತಂಕ ಉಂಟಾಗಿದೆ.
ಹಣದುಬ್ಬರವನ್ನು ಹತ್ತಿಕ್ಕಲು ಆರ್‌ಬಿಐ ಕಳೆದ ಮೇನಿಂದ ತನ್ನ ರೆಪೊ ದರದಲ್ಲಿ 1.40% ಏರಿಕೆ ಮಾಡಿತ್ತು. ಇದೀಗ ಹಣದುಬ್ಬರ 7%ಕ್ಕೆ ಮತ್ತೆ ಏರಿಕೆಯಾಗಿರುವುದರಿಂದ ಆರ್‌ಬಿಐ, ಸೆಪ್ಟೆಂಬರ್ 30ಕ್ಕೆ ನಡೆಸುವ ಹಣಕಾಸು ನೀತಿ ಪರಾಮರ್ಶೆಯಲ್ಲಿ ಮತ್ತೆ ಬಡ್ಡಿ ದರದಲ್ಲಿ 0.25-50% ಏರಿಕೆ ಮಾಡುವ ಸಾಧ್ಯತೆ ಇದೆ.