Site icon Vistara News

Retail trade policy soon : ಚಿಲ್ಲರೆ ವ್ಯಾಪಾರ ನೀತಿ ಶೀಘ್ರ, ಜಿಎಸ್‌ಟಿ ನೋಂದಾಯಿತ ವ್ಯಾಪಾರಿಗಳಿಗೆ ಲಾಭವೇನು?

retail trade

#image_title

ನವ ದೆಹಲಿ: ಸರ್ಕಾರ ಶೀಘ್ರದಲ್ಲಿಯೇ ರಾಷ್ಟ್ರೀಯ ಚಿಲ್ಲರೆ ವ್ಯಾಪಾರ ನೀತಿಯನ್ನು ಘೋಷಿಸಲಿದೆ. ( Retail trade policy soon) ಜತೆಗೆ ಜಿಎಸ್‌ಟಿ ನೋಂದಾಯಿತ ವ್ಯಾಪಾರಿಗಳಿಗೆ ಶೀಘ್ರದಲ್ಲಿಯೇ ಅಪಘಾತ ವಿಮೆ ಸೌಲಭ್ಯ ಸಿಗಲಿದೆ. ವ್ಯಾಪಾರಿಗಳಿಗೆ ಉತ್ತಮ ಮೂಲಸೌಕರ್ಯವನ್ನು ಮತ್ತು ಹೆಚ್ಚು ಸಾಲದ ನೆರವನ್ನು ನೀಡುವ ಪ್ರಸ್ತಾಪವನ್ನು ಇದು ಒಳಗೊಂಡಿದೆ.

ಸಣ್ಣ ವ್ಯಾಪಾರಿಗಳಿಗೆ ಸುಲಭವಾಗಿ ಸಾಲ, ಆಧುನಿಕ ಸೌಲಭ್ಯಗಳು, ರಿಟೇಲ್‌ ವ್ಯಾಪಾರದ ಡಿಜಿಟಲೀಕರಣ, ವಿತರಣೆಯ ಜಾಲದ ನೆರವು, ಕಾರ್ಮಿಕರ ದಕ್ಷತೆ, ಉತ್ಪಾದಕತೆಯ ಅಭಿವೃದ್ಧಿ, ತೊಂದರೆಗಳನ್ನು ಬಗೆಹರಿಸಲು ವ್ಯವಸ್ಥೆಯನ್ನು ಒಳಗೊಂಡಿದೆ. ಭಾರತವು ರಿಟೇಲ್‌ ಮಾರಾಟ ವಲಯದಲ್ಲಿ ಜಾಗತಿಕ ಮಟ್ಟದಲ್ಲಿ 5 ನೇ ಸ್ಥಾನವನ್ನು ಹೊಂದಿದೆ. ಹೀಗಾಗಿ ಜಿಎಸ್‌ಟಿಯಡಿಯಲ್ಲಿ ನೋಂದಾಯಿತ ಎಲ್ಲ ವರ್ತಕರಿಗೆ ಸಾಲ ಮತ್ತು ವಿಮೆಯ ಸೌಲಭ್ಯ ದೊರಕಿಸಿಕೊಡಲು ಸರ್ಕಾರ ಕಾರ್ಯಪ್ರವೃತ್ತವಾಗಿದೆ.

ಉದ್ದೇಶಿತ ನೀತಿಯಲ್ಲಿ ಚಿಲ್ಲರೆ ವ್ಯಾಪಾರಕ್ಕೆ ಕ್ಲಿಯರೆನ್ಸ್‌ ಕುರಿತು ಏಕ ಗವಾಕ್ಷಿ ಯೋಜನೆ (single window clearance ) ಸಿಗಲಿದೆ. ಕಂಪ್ಯೂಟರೈಸ್ಡ್‌ ಇನ್ಸ್‌ಪೆಕ್ಷನ್‌ ಮ್ಯಾನೇಜ್‌ಮೆಂಟ್‌ ಸಿಸ್ಟಮ್‌ ಜಾರಿಯಾಗಲಿದೆ. ಹೊಸ ನೀತಿಯಿಂದ ರಿಟೇಲ್‌ ವ್ಯಾಪಾರಕ್ಕೆ ಅನುಕೂಲವಾಗಲಿದೆ ಎಂದು ಕಾನ್ಫಡರೇಶನ್‌ ಆಫ್ ಆಲ್‌ ಇಂಡಿಯ ಟ್ರೇಡರ್ಸ್‌ ತಿಳಿಸಿದೆ.

ದೇಶದ ಆರ್ಥಿಕತೆಯನ್ನು ಬಲಪಡಿಸುವಲ್ಲಿ ರಿಟೇಲ್‌ ವ್ಯಾಪಾರ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಇದರ ಅಭಿವೃದ್ಧಿಗೆ ಇದುವರೆಗೆ ಸೂಕ್ತ ನೀತಿ ಇರಲಿಲ್ಲ ಎಂದು ಸಿಎಐಟಿ ಪ್ರಧಾನ ಕಾರ್ಯದರ್ಶಿ ಪ್ರವೀಣ್‌ ಖಂಡೆಲ್‌ ವಾಲ್‌ ತಿಳಿಸಿದ್ದಾರೆ. ರಿಟೇಲ್‌ ವರ್ತಕರಿಗೆ ಅಪಘಾತ ವಿಮೆ ನೀಡುವುದರಿಂದ ಸರ್ಕಾರದ ಬೊಕ್ಕಸಕ್ಕೆ ಅವರ ಕೊಡುಗೆಯನ್ನು ಗೌರವಿಸಿದಂತಾಗಿದೆ ಎಂದು ಹೇಳಿದ್ದಾರೆ.

Exit mobile version