Site icon Vistara News

Rishi Sunak | ರಿಷಿ ಸುನಕ್‌, ಅಕ್ಷತಾ ಮೂರ್ತಿ ಸಂಪತ್ತು‌ ಬ್ರಿಟನ್‌ ದೊರೆ ಚಾರ್ಲ್ಸ್‌ಗಿಂತ ಡಬಲ್

akshata murthy

ಲಂಡನ್:‌ ರಿಷಿ ಸುನಕ್‌ ಮತ್ತು ಅಕ್ಷತಾ ಮೂರ್ತಿ ( Rishi Sunak) ದಂಪತಿ ಸಿರಿವಂತರೆಂಬುದು ಎಲ್ಲರಿಗೂ ಗೊತ್ತು. ಆದರೆ ಎಷ್ಟು ಶ್ರೀಮಂತರು ಎನ್ನುತ್ತೀರಾ? ಇಲ್ಲಿದೆ ಉತ್ತರ. ಈ ದಂಪತಿ ಹೊಂದಿರುವ ಸಂಪತ್ತು, ಬ್ರಿಟನ್‌ನ ದೊರೆ ಚಾರ್ಲ್ಸ್‌ III ಹಾಗೂ ಕ್ಯಾಮಿಲ್ಲಾಗಿಂತ ಎರಡು ಪಟ್ಟು ಹೆಚ್ಚು ಎಂದು ವರದಿಯಾಗಿದೆ.

ರಿಷಿ ಸುನಕ್‌ ಮತ್ತು ಅಕ್ಷತಾ ಮೂರ್ತಿ ದಂಪತಿ ಒಟ್ಟಾಗಿ 730 ದಶಲಕ್ಷ ಪೌಂಡ್‌ (ಅಂದಾಜು 6,917 ಕೋಟಿ ರೂ.) ಸಂಪತ್ತು ಹೊಂದಿದ್ದಾರೆ. ಆದರೆ ಕಿಂಗ್‌ ಚಾರ್ಲ್ಸ್‌ III, 350 ದಶಲಕ್ಷ ಪೌಂಡ್‌ (3,317 ಕೋಟಿ ರೂ.) ಆಸ್ತಿ ಹೊಂದಿದ್ದಾರೆ ಎಂದು ಗಾರ್ಡಿಯನ್‌ ವರದಿ ತಿಳಿಸಿದೆ.

ಭಾರತದ ಎರಡನೇ ಅತಿ ದೊಡ್ಡ ಐಟಿ ಕಂಪನಿ ಇನ್ಫೋಸಿಸ್‌ನಲ್ಲಿ ಸ್ಥಾಪಕ ನಾರಾಯಣ ಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿ ಅವರು ಕಳೆದ ಸೆಪ್ಟೆಂಬರ್‌ ಅಂತ್ಯದ ವೇಳೆಗೆ, 3.89 ಕೋಟಿ ಷೇರುಗಳನ್ನು ಹೊಂದಿದ್ದರು. ಇದರ ಮೌಲ್ಯ 5,956 ಕೋಟಿ ರೂ. (ಪ್ರತಿ ಷೇರಿನ ದರ 1,527 ರೂ.) ಆಗಿದೆ.

ಪ್ರಸಕ್ತ ಸಾಲಿಗೆ ಪ್ರತಿ ಷೇರಿಗೆ 16.5 ರೂ. ಡಿವಿಡೆಂಡ್‌ ಅನ್ನು ಕಂಪನಿ ಈ ತಿಂಗಳು ಘೋಷಿಸಿತ್ತು. 2021-22ರಲ್ಲಿ 16 ರೂ. ಡಿವಿಡೆಂಡ್‌ ನೀಡಿತ್ತು. ಎರಡೂ ಕಂತಿನ ಡಿವಿಡೆಂಡ್ 32.5 ರೂ.ಗಳಾಗಿದ್ದು,‌ ಒಟ್ಟು 126.61 ಕೋಟಿ ರೂ.ಗಳನ್ನು ಅಕ್ಷತಾ ಮೂರ್ತಿ ಗಳಿಸಿದ್ದಾರೆ. ಬ್ರಿಟನ್‌ನ 250 ಶ್ರೀಮಂತ ಕುಟುಂಬಗಳಲ್ಲಿ ಸುನಕ್-ಅಕ್ಷತಾ ದಂಪತಿಯ ಕುಟುಂಬವೂ ಇದೆ.

Exit mobile version