ಮುಂಬಯಿ: ಹಿಂದೂಸ್ತಾನ್ ಯುನಿಲಿವರ್ನ (Hindustan Unilever Limited) ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ರೋಹಿತ್ ಜಾವಾ (Rohit Jawa) ನೇಮಕವಾಗಿದ್ದಾರೆ. ಇದು ಭಾರತದ ಅತಿ ದೊಡ್ಡ ಎಫ್ಎಂಸಿಜಿ ಕಂಪನಿಯಾಗಿದೆ. ರೋಹಿತ್ (56) ಪ್ರಸ್ತುತ ಲಂಡನ್ನಲ್ಲಿ ಯುನಿಲಿವರ್ನಲ್ಲಿ ಉನ್ನತ ಕಾರ್ಯಾಚರಣೆ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಹಿಂದೂಸ್ತಾನ್ ಯುನಿಲಿವರ್ನ ಹಾಲಿ ಸಿಇಒ ಸಂಜೀವ್ ಮೆಹ್ತಾ ನಿವೃತ್ತರಾಗುತ್ತಿದ್ದಾರೆ.
2023 ಏಪ್ರಿಲ್ 1ರಿಂದ ಕಂಪನಿಯ ನಿಯೋಜಿತ ಸಿಇಒ ಆಗಿ ರೋಹಿತ್ ಜಾವಾ ಅವರು ಸೇರ್ಪಡೆಯಾಗಲಿದ್ದಾರೆ. ಯುನಿಲಿವರ್ನ ದಕ್ಷಿಣ ಏಷ್ಯಾ ಅಧ್ಯಕ್ಷರಾಗಿಯೂ ನೇಮಕವಾಗಲಿದ್ದಾರೆ. ರೋಹಿತ್ ಅವರು 1988ರಲ್ಲಿ ಎಚ್ಯುಎಲ್ನಲ್ಲಿ ಮ್ಯಾನೇಜಿಂಗ್ ಟ್ರೈನಿ ಆಗಿ ಕರಿಯರ್ ಆರಂಭಿಸಿದ್ದರು.