ನವ ದೆಹಲಿ: ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಎಸ್‌ಬಿಐ ಅದಾನಿ ಸಮೂಹದ ಕಂಪನಿಗಳಿಗೆ (Adani Group shares) 2.6 ಶತಕೋಟಿ ರೂ. ಸಾಲವನ್ನು ನೀಡಿದೆ. (ಅಂದಾಜು 21,000 ಕೋಟಿ ರೂ.) ಅಂದರೆ ಕಾನೂನಿನ ಅಡಿಯಲ್ಲಿ ಎಷ್ಟು ಸಾಲ ಕೊಡಬಹುದೋ, ಅದರ ಅರ್ಧದಷ್ಟು ಮೊತ್ತವನ್ನು ಕೊಟ್ಟಿದೆ ಎಂದು ಮೂಲಗಳು ತಿಳಿಸಿವೆ.
ಅದಾನಿ ಗ್ರೂಪ್ ಕಂಪನಿಗಳು ಇದುವರೆಗೆ ಸಾಲವನ್ನು ಮರು ಪಾವತಿಸುತ್ತಾ ಬಂದಿವೆ. ಯಾವುದೇ ಸಮಸ್ಯೆ ಉಂಟಾಗಿಲ್ಲ ಎಂದು ಎಸ್‌ಬಿಐ ಅಧ್ಯಕ್ಷ ದಿನೇಶ್ ಕುಮಾರ್ ಖರ ಗುರುವಾರ ಹೇಳಿದ್ದಾರೆ. ಅದಾನಿ ಕಂಪನಿಗಳಿಗೆ ಕೊಟ್ಟಿರುವ ಸಾಲದ ವಿವರಗಳನ್ನು ನೀಡುವಂತೆ ಆರ್‌ಬಿಐ ಬ್ಯಾಂಕ್‌ಗಳಿಗೆ ಸೂಚಿಸಿದೆ ಎಂದು ವರದಿಯಾಗಿದೆ.
ಬಿಎಸ್‌ಇನಲ್ಲಿ ಎಸ್‌ಬಿಐ ಷೇರು ದರ ಗುರುವಾರ 527 ರೂ.ನಷ್ಟಿತ್ತು. ಹಿಂಡೆನ್ ಬರ್ಗ್ ವರದಿಯ ಬಳಿಕ ಅದಾನಿ ಕಂಪನಿಯ ಷೇರುಗಳು ಮುಗ್ಗರಿಸಿವೆ.