Site icon Vistara News

Bumper bonus : 19,700 ಉದ್ಯೋಗಿಗಳಿಗೆ 3.5 ಲಕ್ಷ ರೂ. ಬೋನಸ್‌ ನೀಡಿದ ಕಂಪನಿ, ಕಾರಣವೇನು?

Hermes

#image_title

ನವ ದೆಹಲಿ: ಪ್ಯಾರಿಸ್ ಮೂಲದ ಲಕ್ಸುರಿ ಡಿಸೈನ್‌ ಕಂಪನಿಯೊಂದು ತನ್ನ 19,700 ಉದ್ಯೋಗಿಗಳಿಗೆ 4 ಸಾವಿರ ಪೌಂಡ್‌ ವಿಶೇಷ ಬೋನಸ್‌ ನೀಡಿದೆ. (Bumper bonus) ರೂಪಾಯಿ ಲೆಕ್ಕದಲ್ಲಿ 3.5 ಲಕ್ಷ ರೂ.ಗೆ ಸಮವಾಗುವ ಮೊತ್ತವನ್ನು ನೀಡಿದೆ.‌ 1837ರಿಂದ ಕಂಪನಿ ತನ್ನ ಕರಕುಶಲ ಡಿಸೈನ್‌ ಉತ್ಪನ್ನಗಳಿಗೆ ಹೆಸರಾಗಿದೆ. ಈ ಕಂಪನಿಯ ಹೆಸರು ಹರ್ಮೆಸ್ (Hermes) ಉತ್ತಮ ವ್ಯಾಪಾರ, ಲಾಭ ಆಗಿರುವ ಹಿನ್ನೆಲೆಯಲ್ಲಿ ಕಂಪನಿಯು ತನ್ನ 19,700 ಉದ್ಯೋಗಿಗಳಿಗೆ ಭರ್ಜರಿಯಾದ ವಿಶೇಷ ಬೋನಸ್‌ ನೀಡಿದೆ.

ಹರ್ಮೆಸ್ ಕಂಪನಿ ನಾಲ್ಕನೇ ತ್ರೈಮಾಸಿಕಲ್ಲಿ ತನ್ನ ಆದಾಯವನ್ನು 23% ಹೆಚ್ಚಿಸಿಕೊಂಡಿತ್ತು. ಲಕ್ಸುರಿ ಫ್ಯಾಷನ್‌ನಲ್ಲಿ ಲೂಯಿಸ್‌ ವಿಟ್ಟೋನ್‌, ಚನೆಲ್‌ ಬಳಿಕ ಅತಿ ದೊಡ್ಡ ಬ್ರಾಂಡ್‌ ಆಗಿ ಹೊರಹೊಮ್ಮಿತ್ತು. ವಾರ್ಷಿಕ ಆದಾಯ 1 ಲಕ್ಷ ಕೋಟಿ ರೂ.ಗೆ ಏರಿತ್ತು.

ಹರ್ಮೆಸ್‌ ಕಂಪನಿಯ ಸಿಇಒ ಅಕ್ಟೆಲ್‌ ಡ್ಯುಮಾಸ್‌ ಫೆ.17ರಂದು ಸಭೆ ನಡೆಸಿ ವಿಶೇಷ ಬೋನಸ್‌ ಮತ್ತು ನೇಮಕಾತಿ ಬಗ್ಗೆ ನಿರ್ಧಾರ ಕೈಗೊಂಡರು. 2022ರಲ್ಲಿ ಕಂಪನಿ 2,100 ಉದ್ಯೋಗಿಗಳನ್ನೂ ನೇಮಿಸಿತ್ತು.

Exit mobile version