ನವ ದೆಹಲಿ: ರಿಲಯನ್ಸ್ ಜಿಯೊ (Reliance Jio) ಕಳೆದ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ 4,638 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ.
ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 28.3% ಹೆಚ್ಚಳವಾಗಿದೆ. ೨೦೨೧ರ ಇದೇ ಅವಧಿಯಲ್ಲಿ ಕಂಪನಿ 3,615 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು.
ಜಿಯೊದ ತ್ರೈಮಾಸಿಕ ಆದಾಯ 22,998 ಕೋಟಿ ರೂ.ಗೆ ಏರಿಕೆಯಾಗಿದೆ. ಇದಕ್ಕೂ ಹಿಂದಿನ ವರ್ಷದ ಇದೇ ಅವಧಿಯಲ್ಲಿ 19,347 ಕೋಟಿ ರೂ.ಗೆ ವೃದ್ಧಿಸಿತ್ತು. ಕಂಪನಿಯ ನಿವ್ವಳ ಆಸ್ತಿ ಮೌಲ್ಯ 2,11,281 ಕೋಟಿ ರೂ.ಗೆ ಏರಿಕೆಯಾಗಿದೆ.