ನವ ದೆಹಲಿ: ಭಾರತೀಯ ಷೇರು ಮಾರುಕಟ್ಟೆಯಲ್ಲಿ ಶುಕ್ರವಾರ ಹೂಡಿಕೆದಾರರ ಪಾಲಿಗೆ ಕರಾಳ ಆಗಿತ್ತು. (Stock Market) ಒಂದೇ ದಿನ ಅವರ ಸಂಪತ್ತಿನಲ್ಲಿ 6 ಲಕ್ಷ ಕೋಟಿ ರೂ.ಗೂ ಹೆಚ್ಚು ನಷ್ಟವಾಗಿದೆ. ಸೆನ್ಸೆಕ್ಸ್ 874 ಅಂಕ ಕಳೆದುಕೊಂಡು 59,330ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿದರೆ, ನಿಫ್ಟಿ 288 ಅಂಕ ಕಳೆದುಕೊಂಡು 17,604ಕ್ಕೆ ಸ್ಥಿರವಾಯಿತು. ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ವಲಯದ ಷೇರುಗಳ ದರಗಳು ತೀವ್ರ ಕುಸಿತಕ್ಕೀಡಾಯಿತು.
ಬಿಎಸ್‌ಇ ಮಿಡ್‌ಕ್ಯಾಪ್ ಇಂಡೆಕ್ಸ್ 1.29% ಹಾಗೂ ಸ್ಮಾಲ್‌ಕ್ಯಾಪ್ ಇಂಡೆಕ್ಸ್ 1.89% ಇಳಿಕೆ ದಾಖಲಿಸಿತು. ಬಿಎಸ್‌ಇನ ಒಟ್ಟಾರೆ ಮಾರುಕಟ್ಟೆ ಬಂಡವಾಳ ಮೌಲ್ಯ 276 ಲಕ್ಷ ಕೋಟಿ ರೂ.ಗಳಿಂದ 269 ಲಕ್ಷ ಕೋಟಿ ರೂ.ಗೆ ತಗ್ಗಿತು. ಹೂಡಿಕೆದಾರರು 6.6 ಲಕ್ಷ ಕೋಟಿ ರೂ. ಬಡವರಾದರು.