ನವ ದೆಹಲಿ: ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಗುರುವಾರ ಬೆಳಗ್ಗೆ ಡಾಲರ್ ಎದುರು ರೂಪಾಯಿ ಮೌಲ್ಯ 80.62 ಕ್ಕೆ ಕುಸಿಯಿತು. ಬುಧವಾರ 79.97 ರೂ.ಗೆ ವಹಿವಾಟು ಮುಕ್ತಾಯಗೊಳಿಸಿದ್ದ ರೂಪಾಯಿ (Rupee record low) ಇಂದು ಬೆಳಗ್ಗೆ 80.62ಕ್ಕೆ ಕುಸಿಯಿತು.
ಅಮೆರಿಕದಲ್ಲಿ ಫೆಡರಲ್ ರಿಸರ್ವ್ ತನ್ನ ಬಡ್ಡಿ ದರವನ್ನು 0.75% ಏರಿಸಿದ ಬಳಿಕ ಡಾಲರ್ ಎದುರು ಹಲವು ಕರೆನ್ಸಿಗಳು ಮತ್ತಷ್ಟು ಮೌಲ್ಯ ಕುಸಿತ ದಾಖಲಿಸಿವೆ. ಈ ಹಿಂದೆ ಡಾಲರ್ 80.12ರೂ.ಗೆ ಕುಸಿದಿತ್ತು. ಅಮೆರಿಕದ ಡಾಲರ್ ಇಂಡೆಕ್ಸ್ ( US Dollar Index) ಕಳೆದ ಇಪ್ಪತ್ತು ವರ್ಷಗಳಲ್ಲಿಯೇ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ.
ಸೆನ್ಸೆಕ್ಸ್ 317 ಅಂಕ ಪತನ: ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಗುರುವಾರ 313 ಅಂಕ ಕುಸಿಯಿತು. 59,130ಕ್ಕೆ ಇಳಿಯಿತು. ನಿಫ್ಟಿ 99.20 ಅಂಕ ಕಳೆದುಕೊಂಡು 17,619ಕ್ಕೆ ವಹಿವಾಟು ಮುಕ್ತಾಯಗೊಳಿಸಿತು.