Site icon Vistara News

Russia no.1 oil supplier | ಭಾರತಕ್ಕೆ ಅಕ್ಟೋಬರ್‌ನಲ್ಲಿ ನಂ.1 ತೈಲ ಪೂರೈಕೆದಾರ ಸೌದಿ ಅರೇಬಿಯಾ ಅಲ್ಲ, ರಷ್ಯಾ!

crude oil

ನವ ದೆಹಲಿ: ಭಾರತಕ್ಕೆ ಕಳದ ಅಕ್ಟೋಬರ್‌ನಲ್ಲಿ ಅತಿ ಹೆಚ್ಚು ಕಚ್ಚಾ ತೈಲವನ್ನು ಪೂರೈಸಿದ (Russia no.1 oil supplier) ದೇಶವಾಗಿ ರಷ್ಯಾ ಹೊರಹೊಮ್ಮಿದೆ!

ರಷ್ಯಾ ಅಕ್ಟೋಬರ್‌ನಲ್ಲಿ ಭಾರತಕ್ಕೆ ಪ್ರತಿ ದಿನ 9,46,000 ಬ್ಯಾರೆಲ್‌ನಷ್ಟು ಕಚ್ಚಾ ತೈಲವನ್ನು ಸರಬರಾಜು ಮಾಡಿದ್ದು, ಈ ನಿಟ್ಟಿನಲ್ಲಿ ಸೌದಿ ಅರೇಬಿಯಾವನ್ನು ಹಿಂದಿಕ್ಕಿದೆ. ಅಂದರೆ ಭಾರತದ ಕಚ್ಚಾ ತೈಲ ಆಮದಿನಲ್ಲಿ 22% ಪಾಲನ್ನು ರಷ್ಯಾ ವಹಿಸಿದೆ ಎಂದು ಎನರ್ಜಿ ಇಂಟಲಿಜೆನ್ಸ್‌ ಸಂಸ್ಥೆ ವೊಟೆಕ್ಸಾದ ವರದಿ ತಿಳಿಸಿದೆ.

ಇದುವರೆಗೆ ಸೌದಿ ಅರೇಬಿಯಾ ಮತ್ತು ಇರಾಕ್‌ ಅತಿ ಹೆಚ್ಚು ತೈಲವನ್ನು ಸರಬರಾಜು ಮಾಡುತ್ತಿತ್ತು. ಮೊದಲ ಬಾರಿಗೆ ಯುರೋಪ್‌ಗಿಂತಲೂ ಹೆಚ್ಚು ಸಮುದ್ರ ಮಾರ್ಗದ ಮೂಲಕ ತೈಲವನ್ನು ಭಾರತವು ರಷ್ಯಾದಿಂದ ಆಮದು ಮಾಡಿಕೊಂಡಿದೆ.

ಅಕ್ಟೋಬರ್‌ನಲ್ಲಿ ಭಾರತದ ತೈಲ ಖರೀದಿಯ ಪ್ರಮಾಣ ಹೀಗಿತ್ತು: ರಷ್ಯಾ (22%), ಇರಾಕ್‌ (20.5%) ಸೌದಿ ಅರೇಬಿಯಾ (16%), ಯುಎಇ (10%), ಅಮೆರಿಕ (10%)

ರಷ್ಯಾವು ಕಳೆದ ಫೆಬ್ರವರಿಯಲ್ಲಿ ಉಕ್ರೇನ್‌ ವಿರುದ್ಧ ಸಂಘರ್ಷಕ್ಕೆ ಇಳಿದ ಬಳಿಕ ಭಾರತಕ್ಕೆ ರಿಯಾಯಿತಿ ದರದಲ್ಲಿ ಕಚ್ಚಾ ತೈಲವನ್ನು ಸರಬರಾಜು ಮಾಡಲು ಆರಂಭಿಸಿತ್ತು.

Exit mobile version