ನವ ದೆಹಲಿ: ಭಾರತೀಯ ಜೀವ ವಿಮಾ ನಿಗಮದ (Life Insurance Corporation) ಹಂಗಾಮಿ ವ್ಯವಸ್ಥಾಪಕ ನಿರ್ದೇಶಕರಾಗಿ ಸಿದ್ಧಾರ್ಥ ಮೊಹಾಂತಿ ಅವರನ್ನು ಸರ್ಕಾರ ಶನಿವಾರ ನೇಮಕ ಮಾಡಿದೆ. (LIC MD) ಮಾರ್ಚ್ 14ರಿಂದ ಮೂರು ತಿಂಗಳುಗಳ ಅವಧಿಗೆ ಈ ನೇಮಕ ಅನ್ವಯವಾಗಲಿದೆ.
ಎಂ.ಆರ್. ಕುಮಾರ್ ಅವರು ಹಾಲಿ ಅಧ್ಯಕ್ಷರಾಗಿದ್ದು, ಮಾರ್ಚ್ 13ಕ್ಕೆ ಅವಧಿಯನ್ನು ಪೂರ್ಣಗೊಳಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಹಂಗಾಮಿ ಮುಖ್ಯಸ್ಥರಾಗಿ ಮೊಹಾಂತಿ ಅವರನ್ನು ನೇಮಿಸಲಾಗಿದೆ. ಎಲ್‌ಐಸಿ ಒಟ್ಟು 41.66 ಲಕ್ಷ ಕೋಟಿ ರೂ. ಮೌಲ್ಯದ ಆಸ್ತಿಯನ್ನು ನಿರ್ವಹಿಸುತ್ತಿದೆ. ಕುಮಾರ್ ಅವರು ಮತ್ತೊಂದು ಅವಧಿಗೆ ಅಧಿಕಾರ ವಿಸ್ತರಣೆ ಗಳಿಸಿಕೊಳ್ಳಿದ್ದಾರೆ ಎಂಬ ಊಹಾಪೋಹಗಳಿಗೆ ತೆರೆ ಬಿದ್ದಿದೆ. ಹೊಸ ಮುಖ್ಯಸ್ಥರನ್ನು ನೇಮಿಸಲು ಸರ್ಕಾರ ನಿರ್ಧರಿಸಿದೆ.