Site icon Vistara News

Subrata Roy: ಸಹಾರಾ ಇಂಡಿಯಾ ಸಂಸ್ಥಾಪಕ ಸುಬ್ರತಾ ರಾಯ್ ನಿಧನ

Sahara Group founder Subrata Roy Dies

ಮುಂಬೈ: ದೀರ್ಘಾವಧಿಯಿಂದ ಅನಾರೋಗ್ಯಪೀಡಿತರಾಗಿದ್ದ ಸಹಾರಾ ಇಂಡಿಯಾ ಗ್ರೂಪ್ (Sahara India Group) ಸಂಸ್ಥಾಪಕ ಸುಬ್ರತಾ ರಾಯ್ (Subrata Roy Dies) ಅವರು ತಮ್ಮ 75ನೇ ವಯಸ್ಸಿನಲ್ಲಿ ಮಂಗಳವಾರ ನಿಧನರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ನವೆಂಬರ್ 12ರಂದು ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಸಂಸ್ಥೆ (ಕೆಡಿಎಹೆಚ್) ಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ನಿಧನರಾದರು.

ಜೂನ್ 10, 1948ರಂದು ಬಿಹಾರದ ಅರಾರಿಯಾದಲ್ಲಿ ಜನಿಸಿದ ಸುಬ್ರತಾ ರಾಯ್ ಅವರು ಹಣಕಾಸು, ರಿಯಲ್ ಎಸ್ಟೇಟ್, ಮಾಧ್ಯಮ ಮತ್ತು ಆತಿಥ್ಯ ಸೇರಿದಂತೆ ವಿವಿಧ ಕ್ಷೇತ್ರಗಳನ್ನು ವ್ಯಾಪಿಸಿರುವ ವಿಶಾಲವಾದ ಉದ್ಯಮವನ್ನು ಸ್ಥಾಪಿಸಿದ್ದರು.

ನಮ್ಮ ಗೌರವಾನ್ವಿತ ‘ಸಹರಾಶ್ರೀ’ ಸುಬ್ರತಾ ರಾಯ್ ಸಹಾರಾ ಅವರ ನಿಧನವನ್ನು ಸಹರಾ ಇಂಡಿಯಾ ಪರಿವಾರವು ತೀವ್ರ ದುಃಖದಿಂದ ತಿಳಿಸುತ್ತದೆ. ಸ್ಪೂರ್ತಿದಾಯಕ ನಾಯಕ ಮತ್ತು ದಾರ್ಶನಿಕ ಸುಬ್ರತಾ ರಾಯ್ ಅವರು 14 ನವೆಂಬರ್ 2023 ರಂದು ರಾತ್ರಿ 10.30 ಕ್ಕೆ ಹೃದಯ ಸ್ತಂಭನದಿಂದಾಗಿ, ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಿಂದ ಉಂಟಾಗುವ ತೊಡಕುಗಳೊಂದಿಗೆ ಉಸಿರು ಚೆಲ್ಲಿದರು ಎಂದು ಸಹಾರಾ ಇಂಡಿಯಾ ಪರಿವಾರ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಸುಬ್ರತಾ ರಾಯ್ ನಿಧನವು ದೊಡ್ಡ ನಷ್ಟವನ್ನು ಸೃಷ್ಟಿಸಿದೆ. ಇಡೀ ಸಹಾರಾ ಇಂಡಿಯಾ ಪರಿವಾರ್ ಆಳವಾಗಿ ಅನುಭವಿಸುತ್ತದೆ. ಸುಬ್ರತಾ ರಾಯ್ ಅವರು ಮಾರ್ಗದರ್ಶಕ ಶಕ್ತಿಯಾಗಿದ್ದರು, ಮಾರ್ಗದರ್ಶಕರಾಗಿದ್ದರು ಮತ್ತು ಅವರ ಜೊತೆಯಲ್ಲಿ ಕೆಲಸ ಮಾಡುವ ಸವಲತ್ತು ಹೊಂದಿರುವ ಎಲ್ಲರಿಗೂ ಸ್ಫೂರ್ತಿಯ ಮೂಲವಾಗಿದ್ದರು ಸಹಾರಾ ಇಂಡಿಯಾ ಪರಿವಾರ್ ಹೇಳಿದೆ.

ಈ ಸುದ್ದಿಯನ್ನು ಓದಿ: Sahara Refund Portal Launched : ‌ಸಹಾರಾ ರಿಫಂಡ್ ಕ್ಲೇಮ್‌ ಪ್ರಕ್ರಿಯೆ, ಅರ್ಹತೆ ಮತ್ತಿತರ ಡಿಟೇಲ್ಸ್

Exit mobile version