Site icon Vistara News

IT Jobs | ವಿಪ್ರೊದಲ್ಲಿ‌ ಸಂಬಳದ ಪ್ಯಾಕೇಜ್‌ಗೆ ಬಿತ್ತು ಕತ್ತರಿ, ಐಟಿ ಕಂಪನಿಗಳ ಲಾಭ ಇಳಿಕೆ?

Wipro Q4 Results Rs 12,000 crore share buyback from Wipro

Wipro Q4 Results Rs 12,000 crore share buyback from Wipro

ಬೆಂಗಳೂರು: ಭಾರತದ ನಾಲ್ಕನೇ ಅತಿ ದೊಡ್ಡ ಐಟಿ ಕಂಪನಿ ವಿಪ್ರೊದಲ್ಲಿ ಮಧ್ಯಮ ಮತ್ತು ಹಿರಿಯ ಉದ್ಯೋಗಿಗಳಿಗೆ ನೀಡುವ ವೆರಿಯೆಬಲ್‌ ಪೇಯನ್ನು ( IT Jobs ) ತಡೆ ಹಿಡಿಯಲಾಗಿದೆ. ಕಳೆದ ಏಪ್ರಿಲ್-ಜೂನ್‌ ತ್ರೈಮಾಸಿಕಕ್ಕೆ ಇದು ಅನ್ವಯವಾಗಲಿದ್ದು, ಐಟಿ ಕಂಪನಿಗಳ ಲಾಭಾಂಶ ಕಡಿಮೆಯಾಗುತ್ತಿದೆಯೇ ಎಂಬ ಊಹಾಪೋಹಗಳಿಗೆ ಕಾರಣವಾಗಿದೆ.

ವಿಪ್ರೊ ತನ್ನ ಲಾಭಾಂಶದ ಮೇಲೆ ಒತ್ತಡ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್-ಜೂನ್‌ ಅವಧಿಯ ಮಧ್ಯಮ ಮತ್ತು ಹಿರಿಯ ಉದ್ಯೋಗಿಗಳ ವೆರಿಯೆಬಲ್‌ ಪೇ ವಿತರಣೆಯನ್ನು ತಡೆ ಹಿಡಿದಿದೆ. ಈ ಬಗ್ಗೆ ಕಂಪನಿ ಉದ್ಯೋಗಿಗಳಿಗೆ ಇ-ಮೇಲ್‌ ಕಳಿಸಿದೆ. ಸಿ-ಬ್ಯಾಂಡ್ ಮತ್ತು ಮೇಲಿನ ಸ್ತರದ (ಮ್ಯಾನೇಜರ್‌ರಿಂದ ಸಿ-ಶ್ರೇಣಿಯ ತನಕ) ಉದ್ಯೋಗಿಗಳಿಗೆ ವೆರಿಯೆಬಲ್‌ ಪೇ ಇಲ್ಲ ಎಂದು ತಿಳಿಸಿದೆ. ಆದರೆ ಎ ಮತ್ತು ಬಿ ಬ್ಯಾಂಡ್‌‌ನ ಉದ್ಯೋಗಿಗಳಿಗೆ ( ಹೊಸಬರು ಮತ್ತು ಟೀಮ್‌ ಲೀಡರ್‌ ತನಕ) ೭೦% ತನಕ ಟಾರ್ಗೆಟ್‌ ವೆರಿಯೆಬಲ್‌ ಪೇ (Target variable pay) ಸಿಗಲಿದೆ.

ಕಳೆದ ಏಪ್ರಿಲ್-ಜೂನ್‌ ತ್ರೈಮಾಸಿಕದಲ್ಲಿ ಕಂಪನಿಯ ಲಾಭಾಂಶದ (operating margins) ಮೇಲೆ ಒತ್ತಡ ಉಂಟಾಗಿದೆ. ೧೫% ಇಳಿಕೆಯಾಗಿದೆ. ಪ್ರತಿಭಾವಂತ ಉದ್ಯೋಗಿಗಳ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯ, ಉದ್ಯೋಗಿಗಳ ವಲಸೆ ಕೂಡ ಪ್ರಭಾವ ಬೀರಿದೆ. ಹೀಗಾಗಿ ವೆರಿಯೆಬಲ್‌ ಪೇನಲ್ಲಿ ವ್ಯತ್ಯಾಸ ಉಂಟಾಗುತ್ತಿದೆ ಎಂದು ಕಂಪನಿ ತಿಳಿಸಿದೆ. ವಿಪ್ರೊದ ಸೇಲ್ಸ್‌ ಟೀಮ್‌ನ ಉದ್ಯೋಗಿಗಳಿಗೆ ನೀಡುವ ಇನ್ಸೆಂಟಿವ್‌ನಲ್ಲೂ ಕಡಿತ ಉಂಟಾಗಿದೆ.

ವೇತನ ಏರಿಕೆಯಲ್ಲಿ ಬದಲಾವಣೆ ಇಲ್ಲ: ಮುಂಬರುವ ಸೆಪ್ಟೆಂಬರ್‌ ೧ರಿಂದ ಉದ್ಯೋಗಿಗಳ ವೇತನ ಏರಿಕೆಯ ಪ್ರಸ್ತಾಪದಲ್ಲಿ ವ್ಯತ್ಯಾಸ ಉಂಟಾಗುವುದಿಲ್ಲ. ಆದರೆ ವೆರಿಯೆಬಲ್‌ ಪೇನಲ್ಲಿ ಏಪ್ರಿಲ್-ಜೂನ್‌ ತ್ರೈಮಾಸಿಕದಲ್ಲಿ ಬದಲಾವಣೆಯಾಗಿದೆ ಎಂದು ವಿವರಿಸಿದೆ.

ವಿಪ್ರೊದಲ್ಲಿ ಉಂಟಾಗಿರುವ ಈ ಟ್ರೆಂಡ್‌ ಮುಂಬರುವ ದಿನಗಳಲ್ಲಿ ಇತರ ಐಟಿ ಕಂಪನಿಗಳಲ್ಲೂ ಕಂಡು ಬರುವ ಸಾಧ್ಯತೆ ಇದೆ. ಉದ್ಯೋಗಿಗಳ ವೇತನ ಹೆಚ್ಚಳ ಕಂಪನಿಗಳ ಲಾಭಾಂಶವನ್ನು ಕಬಳಿಸುತ್ತಿವೆ. ಹೀಗಾಗಿ ಮತ್ತಷ್ಟು ಐಟಿ ಕಂಪನಿಗಳಲ್ಲಿ ವೇತನ ಪ್ಯಾಕೇಜ್‌ ಕಡಿತವನ್ನು ನಿರೀಕ್ಷಿಸಲಾಗಿದೆ.

ಕ್ರಿಸಿಲ್‌ ರೇಟಿಂಗ್‌ ಏಜೆನ್ಸಿಯ ಸಮೀಕ್ಷೆಯ ಪ್ರಕಾರ ೨೦೨೨-೨೩ರಲ್ಲಿ ಮಾಹಿತಿ ತಂತ್ರಜ್ಞಾನ ಕಂಪನಿಗಳ ಆದಾಯದಲ್ಲಿ ೧೨-೧೩% ಇಳಿಕೆಯಾಗಲಿದೆ. ಹೀಗಿದ್ದರೂ, ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿತ, ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌, ಕ್ಲೌಡ್‌ ಕಂಪ್ಯೂಟಿಂಗ್‌, ಇಂಟರ್‌ನೆಟ್‌ ಆಫ್‌ ಥಿಂಗ್ಸ್‌ ಇತ್ಯಾದಿ ಅತ್ಯಾಧುನಿಕ ತಂತ್ರಜ್ಞಾನಗಳು ಭಾರತೀಯ ಐಟಿಯ ಬೇಡಿಕೆಯನ್ನು ಉಳಿಸಿಕೊಳ್ಳಲಿದೆ.

ಇದನ್ನೂ ಓದಿ: ಟಾಪ್‌ 3 ಐಟಿ ಕಂಪನಿಗಳ ಪೈಕಿ ಇನ್ಫೋಸಿಸ್‌ನಿಂದ ಉದ್ಯೋಗಿಗಳ ವಲಸೆ ಹೆಚ್ಚು

Exit mobile version