Site icon Vistara News

GST rate hike| 5% ತೆರಿಗೆ ತಪ್ಪಿಸಲು ಕಂಪನಿಗಳಿಂದ 25 ಕೆ.ಜಿಗಿಂತ ಹೆಚ್ಚಿನ ಪ್ಯಾಕ್‌ಗಳಲ್ಲಿ ಮಾರಾಟ

food grains

food grains

ನವ ದೆಹಲಿ: ಕಂಪನಿಗಳು ೫% ಜಿಎಸ್‌ಟಿಯನ್ನು ದೂರವಿಡಲು ಬ್ರ್ಯಾಂಡೆಡ್‌ ಅಕ್ಕಿ, ಗೋಧಿ ಹಿಟ್ಟು ಮತ್ತು ಇತರ ಆಹಾರ ಧಾನ್ಯಗಳನ್ನು ೨೫ ಕೆ.ಜಿಗಿಂತ ಹೆಚ್ಚಿನ ತೂಕದ ಪ್ಯಾಕ್‌ಗಳಲ್ಲಿ ಮಾರಾಟ ಮಾಡಲು ಆರಂಭಿಸಿವೆ.

ಪ್ಯಾಕ್‌ ಮಾಡಿರುವ ಮತ್ತು ಲೇಬಲ್‌ ಹೊಂದಿರುವ ಹಾಗೂ ೨೫ ಕೆ.ಜಿ ತನಕ ತೂಕವಿರುವ ಪ್ಯಾಕ್‌ಗಳಿಗೆ ೫% ಜಿಎಸ್‌ಟಿ ಅನ್ವಯವಾಗುತ್ತದೆ ಎಂದು ಸಿಬಿಐಸಿ ಸ್ಪಷ್ಟಪಡಿಸಿರುವ ಹಿನ್ನೆಲೆಯಲ್ಲಿ ಕಂಪನಿಗಳು ಈ ಜಾಣ್ಮೆಯ ನಡೆಯನ್ನು ಅನುಸರಿಸುತ್ತಿವೆ. ಈ ಪ್ಯಾಕ್‌ಗಳು ಮುಖ್ಯವಾಗಿ ದಿನಸಿ ಅಂಗಡಿಗಳಿಗೆ ಮಾರಾಟವಾಗುತ್ತವೆ. ಸಣ್ಣ ಪ್ಯಾಕ್‌ಗಳಿಗೆ ೫% ಜಿಎಸ್‌ಟಿ ತಗಲುತ್ತದೆ.

ಆಹಾರ ಧಾನ್ಯ, ಬೇಳೆಕಾಳುಗಳ ಉತ್ಪಾದಕರು ಈಗ ೨೫ಕೆ.ಜಿಗಿಂತ ಹೆಚ್ಚಿನ ಸಿಂಗಲ್‌ ಪ್ಯಾಕ್‌ನಲ್ಲಿ ಉತ್ಪನ್ನಗಳನ್ನು ಶೇಖರಿಸಿ ಕಿರಾಣಾ ಅಂಗಡಿಗಳಿಗೆ ಮಾರಾಟ ಮಾಡಿದರೆ ೫% ಜಿಎಸ್‌ಟಿ ಕೊಡಬೇಕಿಲ್ಲ. ಅಂಗಡಿ ಮಾಲೀಕರು ಪ್ಯಾಕ್‌ ಅನ್ನು ಹರಿದು ಗ್ರಾಹಕರಿಗೆ ಅಗತ್ಯಕ್ಕೆ ತಕ್ಕಂತೆ ಮಾರಾಟ ಮಾಡಬಹುದು. ಗ್ರಾಹಕರು ಯಾವುದೇ ಜಿಎಸ್‌ಟಿ ಕೊಡಬೇಕಾಗುವುದಿಲ್ಲʼʼ ಎಂದು ಭಾರತೀಯ ಆಹಾರಧಾನ್ಯಗಳ ಸಂಘಟನೆಯ ಅಧ್ಯಕ್ಷ ಬಿಮಲ್‌ ಕೊಠಾರಿ ತಿಳಿಸಿದ್ದಾರೆ.

ಇದನ್ನೂ ಓದಿ: GST | ಅಕ್ಕಿ, ಗೋಧಿ, ಬೇಳೆ ಕಾಳುಗಳ ಚಿಲ್ಲರೆ ಮಾರಾಟಕ್ಕೆ ಜಿಎಸ್‌ಟಿ ಇಲ್ಲ: ಕೇಂದ್ರ ಸ್ಪಷ್ಟನೆ

Exit mobile version