Site icon Vistara News

Sales professional : ಸೇಲ್ಸ್‌ನಲ್ಲಿ ಅದ್ಭುತ ಯಶಸ್ಸು ಕಂಡವರ 4 ಕ್ವಾಲಿಟಿಗಳೇನು ಗೊತ್ತೇ?

ನೀವು ಸೇಲ್ಸ್‌ ವೃತ್ತಿಯಲ್ಲಿ ಯಶಸ್ವಿಯಾಗಿ ಸಾಧನೆಯ ಹಾದಿಯಲ್ಲಿ ಮುನ್ನಡೆಯಲು ಬಯಸುತ್ತಿದ್ದೀರಾ? ಹಾಗಾದರೆ ನೀವು ಸೇಲ್ಸ್‌ ಮ್ಯಾನ್‌ ಆಗಬಾರದು. ಸೇಲ್ಸ್‌ ಪ್ರೊಫೆಷನಲ್‌ ಆಗಬೇಕು. ಸೇಲ್ಸ್‌ ಎನ್ನುವುದು ( Sales professional) ಒಂದು ಪ್ರೊಫೆಶನ್.‌ ಅದು ಜಾಬ್‌ ಅಲ್ಲ. ಜಾಬ್‌ ಮತ್ತು ಪ್ರೊಫೆಶನ್‌ ಬಗ್ಗೆ ವ್ಯತ್ಯಾಸವೇನು ಎನ್ನುತ್ತೀರಾ? ಇದು ಸರಳ. ಜಾಬ್‌ನಲ್ಲಿ ನಿಮಗೆ ಪ್ರತಿ ತಿಂಗಳು ನಿಶ್ಚಿತ ವೇತನ ಸಿಗುತ್ತದೆ. ಆದರೆ ಪ್ರೊಫೆಶನ್‌ನಲ್ಲಿ ನೀವು ಫಲಿತಾಂಶಕ್ಕೆ ತಕ್ಕಂತೆ ಆದಾಯ ಗಳಿಸುತ್ತೀರಿ. ನೀವು ಸೇಲ್ಸ್‌ ಅನ್ನು ಜಾಬ್‌ ಎಂದು ಪರಿಗಣಿಸಿದರೆ, ಎಷ್ಟು ಗಂಟೆ ಕೆಲಸ ಮಾಡುತ್ತೀರಿ ಎಂಬುದರ ಮೇಲೆ ಮನಸ್ಸನ್ನು ಫೋಕಸ್‌ ಮಾಡುತ್ತೀರಿ. ನೀವು ಆಗ ಫಲಿತಾಂಶವನ್ನು ಆಧರಿಸಿ ಕೆಲಸ ಮಾಡುವುದಿಲ್ಲ. ಜಾಬ್‌ನಲ್ಲಿ ನೀವು ರಿಸಲ್ಟ್‌ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ನೀವು ಹೆಚ್ಚು ಸೇಲ್ಸ್‌ ಮಾಡಿದರೂ ನಿಮ್ಮ ಸಂಬಳ ಹೆಚ್ಚಾಗುವುದಿಲ್ಲ. ಪ್ರತಿ ತಿಂಗಳೂ ಒಂದೇ ರೀತಿಯ ಸಂಬಳ ಸಿಗುವುದು. ಜಾಬ್‌ ನಿಮ್ಮನ್ನು ದಣಿಸುತ್ತದೆ.

ಸೇಲ್ಸ್‌ನಲ್ಲಿ ನೀವು ಕಠಿಣ ಪರಿಶ್ರಮ ಪಡಬೇಕಾಗಿ ಬರಬಹುದು. ಕೆಲವು ಸಂದರ್ಭಗಳಲ್ಲಿ ಕುಟುಂಬದಿಂದ ದೂರ ಇರಬೇಕಾಗಬಹುದು. ನೀವು ಕಷ್ಟಗಳನ್ನು ಸಹಿಸಬೇಕಾಗಬಹುದು. ಹೀಗಿದ್ದರೂ, ನೀವು ಸೇಲ್ಸ್‌ ಅನ್ನು ಒಂದು ಪ್ರೊಫೆಶನ್‌ ಎಂದು ನೋಡಿದರೆ, ನೀವು ಚೈತನ್ಯಭರಿತರಾಗುತ್ತೀರಿ. ನೀವು ಸದಾ ಚೆನ್ನಾಗಿ, ಆರೋಗ್ಯವಂತರಾಗಿ ಇರಬೇಕೆಂದು ಬಯಸುತ್ತೀರಿ. ಫಿಟ್ನೆಸ್‌ ಕಾಪಾಡಿಕೊಳ್ಳುವಿರಿ. ಕಾಡಿನಲ್ಲಿ ಸಂಚರಿಸುವ ಸಿಂಹದಂತೆ ಇರುತ್ತೀರಿ. ಸಿಂಹದಂತೆ ಉಗುರುಗಳನ್ನು ಹರಿತವಾಗಿಸುತ್ತೀರಿ. ಶರೀರವನ್ನು ಆರೋಗ್ಯವನ್ನಾಗಿಟ್ಟು ಕೊಳ್ಳುತ್ತೀರಿ. ನೀವು ಯಾವುದಾದರೂ ಜಾಬ್‌ನಲ್ಲಿ ಇದ್ದರೆ ಸರ್ಕಸ್‌ನಲ್ಲಿ ಇರುವ ಸಿಂಹದಂತೆ ಇರುತ್ತೀರಿ. ಸರ್ಕಸ್‌ನಲ್ಲಿರುವ ಸಿಂಹಕ್ಕೆ ದಿನಕ್ಕೆ ಒಂದು ಸಲವೂ ಎರಡು ಸಲವೊ ಮಾಂಸ ನೀಡಲಾಗುತ್ತದೆ. ಹೇಗೂ ಮಾಂಸ ಸಿಗುತ್ತದೆ ಎಂದು ಸಿಂಹವೂ ಉದಾಸೀನವಾಗುತ್ತದೆ. ಕಾಡಿನಲ್ಲಿ ಸ್ವತಂತ್ರವಾಗಿ ತಿರುಗಾಡುವ ಸಿಂಹಕ್ಕೆ ಇರುವ ಶಕ್ತಿ, ಸಾಮರ್ಥ್ಯ ಬೋನಿನಲ್ಲಿ ಇರುವ ಸಿಂಹಕ್ಕೆ ಇರುವುದಿಲ್ಲ.

ಸೇಲ್ಸ್‌ ಅನ್ನು ಪ್ರೊಫೆಶನ್‌ ಆಗಿಸಿದರೆ ಜೀವನಪೂರ್ತಿ ಕಲಿಕೆ-ಗಳಿಕೆ ಎರಡನ್ನೂ ಮಾಡಬಹುದು. ಸಂಪತ್ತು ನಿಮ್ಮದಾಗುತ್ತದೆ. ಫಿಟ್ನೆಸ್‌ ಮತ್ತು ಎನರ್ಜಿಯನ್ನೂ ಕಾಪಾಡಬಹುದು. ಸೇಲ್ಸ್‌ನಿಂದ ಹಣ ಸಂಪಾದನೆ, ಜೀವನದಲ್ಲಿ ನೆಮ್ಮದಿ, ಕ್ರಿಯಾಶೀಲತೆ, ಸೃಜನಶೀಲತೆ, ಫಿಟ್ನೆಸ್‌ ಅನ್ನು ಉಳಿಸಿಕೊಳ್ಳಬಹುದು. ಆದ್ದರಿಂದ ಸೇಲ್ಸ್‌ ಅನ್ನು ಜಾಬ್‌ ಎಂದು ಭಾವಿಸದಿರಿ. ಪ್ರೊಫೆಶನ್‌ ಎಂದು ಪರಿಗಣಿಸಿ.

ಇದನ್ನೂ ಓದಿ: Selfie With Ramotsava : ಇಲ್ಲಿದ್ದಾರೆ ಕರುನಾಡ ರಾಮಲಲ್ಲಾ; ಎಲ್ಲೆಲ್ಲೂ ರಾಮನನ್ನೇ ಕಂಡೆನಲ್ಲ!

ಸೇಲ್ಸ್‌ ಪ್ರೊಫೆಶನಲ್‌ಗಳಿಗೆ ನಾಲ್ಕು ಕ್ವಾಲಿಟಿಗಳು ಇರುತ್ತವೆ. ಮೊದಲನೆಯದಾಗಿ ನೀವು ಅದನ್ನು ಜಾಬ್‌ ಎಂದು ಗಣಿಸಬಾರದು. ಪ್ರೊಫೆಶನಲ್‌ ಎಂದು ಭಾವಿಸಬೇಕು. ಎರಡನೆಯದಾಗಿ ಪ್ರೊಫೆಶನಲ್‌ ವ್ಯಕ್ತಿ ತಾನಾಗಿಯೇ ಕೆಲಸ ಮಾಡುತ್ತಾನೆ. ಮೇಲುಸ್ತುವಾರಿಯನ್ನು ಬಯಸುವುದಿಲ್ಲ. ತಾನಾಗಿಯೇ ಕಠಿಣ ಗುರಿಗಳನ್ನು ತೆಗೆದುಕೊಳ್ಳುತ್ತಾನೆ. ಪರ್ವತಗಳನ್ನೇ ಚಲಿಸುವ ಗುರಿಗಳನ್ನು ಹಾಕಿಕೊಳ್ಳುತ್ತಾನೆ. ಮಾರ್ಗದರ್ಶನದ ಅಗತ್ಯ ಇಲ್ಲದೆಯೇ ಕೆಲಸ ಮಾಡುತ್ತಾನೆ. ಮೂರನೆಯದಾಗಿ, ಪ್ರೊಫೆಶನಲ್‌ ಆಗಿರುವವು ತನಗೆ ತಾನೇ ಶಿಕ್ಷಣ ನೀಡುತ್ತಾನೆ. ಜಾಬ್‌ ನಲ್ಲಿರುವೆ ಎಂದು ಭಾವಿಸುವವನು ಕಂಪನಿಯ ಜವಾಬ್ದಾರಿ ಎಂದು ಅಂದುಕೊಳ್ಳುತ್ತಾನೆ. ನಾಲ್ಕನೆಯದಾಗಿ ಪ್ರೊಫೆಶನಲ್‌ ವ್ಯಕ್ತಿ ತನ್ನ ಅನುಭವಗಳಿಂದ ಪಾಠ ಕಲಿಯುತ್ತಾನೆ. ಕೆಲಸದ ನೀತಿ ಸಂಹಿತೆಗಳನ್ನು ಪಾಲಿಸುತ್ತಾನೆ. ಗ್ರಾಹಕರನ್ನು ದೇವರೆಂದು ಪರಿಗಣಿಸುತ್ತಾನೆ.

Exit mobile version