ನವ ದೆಹಲಿ: ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಕಳೆದ ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ ಕೊರಿಯಾದ ಸ್ಯಾಮ್‌ಸಂಗ್ ಮತ್ತೆ ಮೊದಲ ಸ್ಥಾನ ಗಳಿಸಿದೆ ಎಂದು (Samsung no. 1) ಮಾರುಕಟ್ಟೆ ಸಂಶೋಧಕ ಕನಾಲ್ಸ್ ವರದಿ ತಿಳಿಸಿದೆ.
2022ರಲ್ಲಿ ಸ್ಯಾಮ್ ಸಂಗ್, ಚೀನಾ ಮೂಲದ ಶಿಯೋಮಿಯನ್ನು ಹಿಂದಿಕ್ಕಿದೆ ಎಂದು ವರದಿ ತಿಳಿಸಿದೆ. ಕಳೆದ ವರ್ಷ 15.1 ಕೋಟಿ ಸ್ಮಾರ್ಟ್‌ಫೋನ್‌ಗಳು ಮಾರಾಟವಾಗಿದ್ದು, 6% ಇಳಿಕೆಯಾಗಿದೆ ಎಂದು ತಿಳಿಸಿದದೆ.
2017ರ ಮೂರನೇ ತ್ರೈಮಾಸಿಕದ ಬಳಿಕ ಮೊದಲ ಬಾರಿಗೆ ಸ್ಯಾಮ್‌ಸಂಗ್ ಅಗ್ರ ಸ್ಥಾನ ಗಳಿಸಿದೆ. ಹಬ್ಬಗಳ ಅವಧಿಯಲ್ಲೂ ವ್ಯಾಪಾರ ಮಂದಗತಿಯಲ್ಲಿ ಇತ್ತು ಎಂದು ತಿಳಿಸಿದೆ.