ನವ ದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಉಳಿತಾಯ ಖಾತೆಗಳ ಬಡ್ಡಿ ದರವನ್ನು ಪರಿಷ್ಕರಿಸಿದ್ದು, ವಾರ್ಷಿಕ 2.70%ರಿಂದ 3% ತನಕ ಬಡ್ಡಿ ದರ ಸಿಗಲಿದೆ. ಈ ಹಿಂದೆ 2.7೦%ರಿಂದ 2.75% ತನಕ ಬಡ್ಡಿ ದರ ಇತ್ತು. 10 ಕೋಟಿ ರೂ.ಗಿಂತ ಕೆಳಗಿನ ಬ್ಯಾಲೆನ್ಸ್‌ಗೆ 2.70% ಹಾಗೂ 10 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತಕ್ಕೆ 3% ಬಡ್ಡಿ ದರ ಸಿಗಲಿದೆ.
ಪರಿಷ್ಕೃತ ಬಡ್ಡಿ ದರಗಳು 2022ರ ಅಕ್ಟೋಬರ್ 15ರಿಂದ ಅನ್ವಯವಾಗುತ್ತಿದೆ. ಎಸ್‌ಬಿಐ ತನ್ನ ಗ್ರಾಹಕರಿಗೆ ವೀಡಿಯೊ ಕೆವೈಸಿ ಸೇವಿಂಗ್ ಅಕೌಂಟ್, ಸೇವಿಂಗ್ಸ್ ಬ್ಯಾಂಕ್ ಅಕೌಂಟ್, ಅಪ್ರಾಪ್ತರಿಗೆ ಉಳಿತಾಯ ಖಾತೆ, ಸೇವಿಂಗ್ಸ್ ಪ್ಲಸ್ ಅಕೌಂಟ್, ಮೋಟಾರ್ ಆಕ್ಸಿಡೆಂಟ್ಸ್ ಕ್ಲೇಮ್ ಅಕೌಂಟ್, ರೆಸಿಡೆಂಟ್ ಫಾರಿನ್ ಕರೆನ್ಸಿ ಅಕೌಂಟ್, ಇನ್‌ಸ್ಟಾ ಪ್ಲಸ್ ವೀಡಿಯೊ ಕೆವೈಸಿ ಸೇವಿಂಗ್ಸ್ ಅಕೌಂಟ್ ಇತ್ಯಾದಿ ಸೌಲಭ್ಯಗಳನ್ನು ನೀಡುತ್ತದೆ.
ಎಚ್‌ಡಿಎಫ್‌ಸಿ ಬ್ಯಾಂಕ್ 50 ಲಕ್ಷ ರೂ.ಗಿಂತ ಕಡಿಮೆ ಮೊತ್ತದ ಬ್ಯಾಲೆನ್ಸ್‌ಗೆ ಎಸ್‌ಬಿ ಖಾತೆಯಲ್ಲಿ 3% ಬಡ್ಡಿ ನೀಡುತ್ತದೆ.