ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ಎಸ್‌ಬಿಐ (SBI Amrit Kalash FD) 400 ದಿನಗಳ ಅಮೃತ್ ಕಲಶ್ ಡೆಪಾಸಿಟ್ ಸ್ಕೀಮ್ ಅವಧಿ 2023ರ ಡಿಸೆಂಬರ್ 31ಕ್ಕೆ ವಿಸ್ತರಣೆಯಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಿದೆ. ಈ ಹಿಂದೆ 2023ರ ಆಗಸ್ಟ್ 15 ಡೆಡ್‌ಲೈನ್ ಆಗಿತ್ತು. ಎಸ್‌ಬಿಐ 2023ರ ಫೆಬ್ರವರಿ 15ರಂದು ಈ ವಿಶೇಷ ಎಫ್‌ಡಿ ಸ್ಕೀಮ್ ಅನ್ನು ಬಿಡುಗಡೆಗೊಳಿಸಿತ್ತು.
ಈ ಯೋಜನೆಯಲ್ಲಿ ಬಡ್ಡಿಯನ್ನು ಮಾಸಿಕ, ತ್ರೈಮಾಸಿಕ ಅಥವಾ ಅರ್ಧ ವಾರ್ಷಿಕ ಅವಧಿಗೆ ನೀಡುವ ವ್ಯವಸ್ಥೆ ಇದೆ. ದೇಶೀಯ ಹಾಗೂ ಅನಿವಾಸಿ ಭಾರತೀಯರು ಈ ಯೋಜನೆಯಲ್ಲಿ ಠೇವಣಿ ಇಡಬಹುದು.
ಎಸ್‌ಬಿಐ ಅಮೃತ್ ಕಲಶ್ ಸ್ಕೀಮ್ ಕೊನೆ ದಿನಾಂಕ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಮೃತ್ ಕಲಶ್ ಫಿಕ್ಸೆಡ್ ಡೆಪಾಸಿಟ್ ಸ್ಕೀಮ್‌ನ ಕೊನೆಯ ದಿನಾಂಕವನ್ನು 2023ರ ಡಿಸೆಂಬರ್ 31ಕ್ಕೆ ಮುಂದೂಡಲಾಗಿದೆ.
ಎಸ್‌ಬಿಐ ಅಮೃತ್ ಕಲಶ್ ಬಡ್ಡಿ ದರ: ಎಸ್‌ಬಿಐ ಅಮೃತ್ ಕಲಶ್ ಯೋಜನೆಯಲ್ಲಿ ರೆಗ್ಯುಲರ್ ಗ್ರಾಹಕರಿಗೆ 7.1% ಮತ್ತು ಹಿರಿಯ ಗ್ರಾಹಕರಿಗೆ 7.6% ಬಡ್ಡಿ ಸಿಗುತ್ತದೆ.
ಇದನ್ನೂ ಓದಿ: ವಿಸ್ತಾರ Money Guide: ಹಣ ಗಳಿಕೆಯ ಮೇಲೆ ಪ್ರಭಾವ ಬೀರುವ ಮೂರು ಮನಸ್ಥಿತಿಗಳು ಯಾವುವು?
ಎಸ್‌ಬಿಐ ಅಮೃತ್ ಕಲಶ್ ಬೆನಿಫಿಟ್ : ಎಸ್‌ಬಿಐ ಅಮೃತ್ ಕಲಶ್ ಫಿಕ್ಸೆಡ್ ಡೆಪಾಸಿಟ್ ಸ್ಕೀಮ್ 2 ಕೋಟಿ ರೂ.ಗಿಂತ ಕಡಿಮೆ ಮೊತ್ತದ ಡೆಪಾಸಿಟ್ ಯೋಜನೆಯಾಗಿದೆ.
ಅಮೃತ್ ಕಲಶ್‌ಗೆ ತೆರಿಗೆ: ಆದಾಯ ತೆರಿಗೆ ಕಾಯಿದೆಯ ಪ್ರಕಾರ ಟಿಡಿಎಸ್ ಅನ್ವಯಿಸುತ್ತದೆ. ಸಾಲ ಸೌಲಭ್ಯವೂ ಸಿಗುತ್ತದೆ. ಎಸ್‌ಬಿಐ ಶಾಖೆಗೆ ತೆರಳಿ ಪಡೆಯಬಹುದು. ಇಂಟರ್‌ನೆಟ್ ಬ್ಯಾಂಕಿಂಗ್ ಮೂಲಕವೂ ಪಡೆಯಬಹುದು. ಎಸ್ ಬಿಐ ಯುನೊ ಅಪ್ಲಿಕೇಶನ್ ಮೂಲಕವೂ ಗಳಿಸಬಹುದು.