ನವ ದೆಹಲಿ: ದೇಶದ ಅತಿ ದೊಡ್ಡ ಬ್ಯಾಂಕ್ ಎಸ್‌ಬಿಐ ಮುಂದಿನ 3 ವರ್ಷಗಳಲ್ಲಿ ತನ್ನ ಅರ್ಧದಷ್ಟು ಎಂಟಿಎಂಗಳನ್ನು ಬದಲಿಸಲು ನಿರ್ಧರಿಸಿದೆ. ಇದೇ ವೇಳೆ ತನ್ನ ಬಿಸಿನೆಸ್ ಕರೆಸ್ಪಾಂಡೆಂಟ್ (Business Correspondent) ನೆಟ್ ವರ್ಕ್ ಅನ್ನು 30,000ಕ್ಕೆ ವಿಸ್ತರಿಸಲು ಉದ್ದೇಶಿಸಿದೆ. ಇದರಿಂದಾಗಿ ಬ್ಯಾಂಕಿನ ಶಾಖೆಗೆ ( SBI ATM) ಗ್ರಾಹಕರ ಭೇಟಿ ಕಡಿಮೆಯಾಗಲಿದೆ. ಬ್ಯಾಂಕಿನ ಸಿಬ್ಬಂದಿಯನ್ನು ಸೇಲ್ಸ್ ಮತ್ತು ಮಾರ್ಕೆಟಿಂಗ್‌ಗೆ ಬಳಸಲು ಹಾದಿ ಸುಗಮವಾಗಲಿದೆ.
ಪ್ರಸ್ತುತ ಬ್ಯಾಂಕಿನ 97% ವರ್ಗಾವಣೆಗಳು ಪರ್ಯಾಯ ಡೆಲಿವರಿ ಚಾನೆಲ್‌ಗಳ ಮೂಲಕ ನಡೆಯುತ್ತದೆ. ಇಂಟರ್‌ನೆಟ್, ಮೊಬೈಲ್, ಯುಪಿಐ, ಯುನೊ ಇತ್ಯಾದಿಗಳ ಮೂಲಕ ನಡೆಯುತ್ತದೆ. ಎಸ್‌ಬಿಐ 34,250 ಎಟಿಎಂಗಳನ್ನು ಹೊಸ ಎಟಿಎಂಗೆ ಬದಲಿಸಲು ಉದ್ದೇಶಿಸಿದೆ.
ಎಸ್‌ಬಿಐ 2023-24ರಲ್ಲಿ ತನ್ನ ಶಾಖೆಗಳಿಗೆ ಅವುಗಳ ಬಿಸಿನೆಸ್ ಟಾರ್ಗೆಟ್ ಮತ್ತು ಸಾಧನೆಯನ್ನು ಆಧರಿಸಿ ಕಲರ್ ಕೋಡ್ ನೀಡಿ ವರ್ಗೀಕರಿಸಲು ಉದ್ದೇಶಿಸಿದೆ. ಎಸ್‌ಬಿಐ ಮುಂಬಯಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದ್ದು, ಜಗತ್ತಿನ 49ನೇ ಅತಿ ದೊಡ್ಡ ಬ್ಯಾಂಕ್ ಎನ್ನಿಸಿದೆ. 22,219 ಶಾಖೆಗಳನ್ನು ಒಳಗೊಂಡಿದೆ.
ಅಗ್ರಿ ಟೆಕ್ ಕಂಪನಿ ಫಸಲ್, ಎಸ್‌ಬಿಐ ಜತೆಗೆ ಒಪ್ಪಂದ ಮಾಡಿಕೊಂಡಿದೆ. ರೈತರಿಗೆ ಸ್ಪರ್ಧಾತ್ಮಕ ದರದಲ್ಲಿ ಸಾಲ ನೀಡಲು ಇದು ನೆರವಾಗಲಿದೆ. ಕಿಸಾನ್ ಕಾರ್ಡ್ ಯೋಜನೆ ಅಡಿಯಲ್ಲಿ ಸಾಲ ವಿತರಣೆಯಾಗಲಿದೆ. ಆರಂಭದಲ್ಲಿ ನಾಲ್ಕು ರಾಜ್ಯಗಳಲ್ಲಿ ಸಿಗಲಿದೆ. ಬಳಿಕ ಇತರ ಕಡೆಗೆ ವಿಸ್ತರಣೆಯಾಗಲಿದೆ. ಕೇಂದ್ರ ಸರ್ಕಾರ 2023-24ರ ಸಾಲಿಗೆ 20 ಲಕ್ಷ ಕೋಟಿ ರೂ. ಕೃಷಿ ಸಾಲ ವಿತರಣೆಯ ಟಾರ್ಗೆಟ್ ಹೊಂದಿದೆ.