ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ನಿಶ್ಚಿತ ಠೇವಣಿಗಳ (ಎಫ್‌ಡಿ) ಬಡ್ಡಿ ದರದಲ್ಲಿ ಶೇ.0.20 ತನಕ ಏರಿಸಿದೆ.
ಪರಿಷ್ಕೃತ ಬಡ್ಡಿ ದರಗಳು ಜೂನ್ 14ರಿಂದ ಜಾರಿಯಾಗಲಿದೆ. ಎರಡು ಕೋಟಿ ರೂ.ಗಿಂತ ಕಡಿಮೆ ಮೊತ್ತದ ಫಿಕ್ಸೆಡ್ ಡಿಪಾಸಿಟ್‌ಗಳಿಗೆ ಇದು ಅನ್ವಯವಾಗಲಿದೆ.
ಎಸ್‌ಬಿಐ ವೆಬ್‌ಸೈಟ್ ಪ್ರಕಾರ 200 ದಿನಗಳಿಂದ ಒಂದು ವರ್ಷ ಅವಧಿಯ ತನಕದ ಎಫ್‌ಡಿಗಳಿಗೆ ಬಡ್ಡಿ ದರ 4.60% ನಿಗದಿಯಾಗಿದೆ.
1-2 ವರ್ಷದ ಠೇವಣಿಗೆ ಬಡ್ಡಿ ದರ 5.3%ಕ್ಕೆ ಏರಿಕೆಯಾಗಿದೆ. 2-3 ವರ್ಷಕ್ಕೆ ಬಡ್ಡಿ 5.35% ವೃದ್ಧಿಸಿದೆ. ಎಫ್‌ಡಿ ಬಡ್ಡಿ ದರ ಏರಿಕೆಯಿಂದ ಸಣ್ಣ ಉಳಿತಾಯಗಾರರಿಗೆ, ಮುಖ್ಯಾಗಿ ಹಿರಿಯ ನಾಗರಿಕರಿಗೆ ಅನುಕೂಲ ಆಗುತ್ತದೆ. ಆದರೆ ಈಗಿನ ಹಣದುಬ್ಬರದ ಎದುರು ಈ ಬಡ್ಡಿ ದರ ಕೂಡ ಕಡಿಮೆಯೇ ಆಗಿದೆ. ಉದಾಹರಣೆಗೆ ಈಗ ಹಣದುಬ್ಬರ ಶೇ.7.04 ಇದೆ. ಇದರ ಎದುರು ನಿಮ್ಮ ಠೇವಣಿಗೆ 5.35% ಬಡ್ಡಿ ಕೊಟ್ಟರೂ, ಹಣದುಬ್ಬರ ಅದನ್ನು ನುಂಗುತ್ತದೆ. ಬಡ್ಡಿ ದರ ಹಣದುಬ್ಬರಕ್ಕಿಂತ ಮೇಲಿನ ಮಟ್ಟದಲ್ಲಿ ಇದ್ದರೆ ಮಾತ್ರ ಪ್ರಯೋಜನವಾದೀತು.
SBI ನಿಶ್ಚಿತ ಠೇವಣಿ ಬಡ್ಡಿ ದರ
ಅವಧಿ | ಸಾಮಾನ್ಯ ಠೇವಣಿದಾರರಿಗೆ | ಹಿರಿಯ ನಾಗರಿಕರಿಗೆ |
7-45 ದಿನಗಳಿಗೆ | 2.9 % | 3.4 % |
46-179 ದಿನಗಳಿಗೆ | 3.90 % | 4.4 % |
180-210 ದಿನಗಳಿಗೆ | 4.4 % | 4.9 % |
211-1 ವರ್ಷ | 4.6 % | 5.1 % |
1-2 ವರ್ಷ | 5.3 % | 5.8 % |
2-3 ವರ್ಷ | 5.35 % | 5.85 % |
3-5 ವರ್ಷ | 5.45 % | 5.95 % |
5-10 ವರ್ಷ | 5.5 % | 6.30 % |