Site icon Vistara News

SBI FD Interest rate : ಎಸ್‌ಬಿಐ‌ ಎಫ್‌ಡಿ ಬಡ್ಡಿ ದರ 7.1%ಕ್ಕೆ ಏರಿಕೆ, ಇಲ್ಲಿದೆ ಡಿಟೇಲ್ಸ್

cash

ನವ ದೆಹಲಿ: ಸಾರ್ವಜನಿಕ ವಲಯದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (SBI) ತನ್ನ ನಿಶ್ಚಿತ ಅವಧಿಯ ಠೇವಣಿಗಳ (Fixed deposits) ಬಡ್ಡಿ ದರವನ್ನು ಏರಿಸಿದೆ. 0.25% ತನಕ ಬಡ್ಡಿ ದರಗಳು ಏರಿಕೆಯಾಗಿದ್ದು, ವಿವರಗಳು ಇಲ್ಲಿವೆ. ಹೊಸ ಬಡ್ಡಿ ದರ 7.1%ಕ್ಕೆ ನಿಗದಿಯಾಗಿದ್ದು ಎಸ್‌ಬಿಐ ವೆಬ್‌ಸೈಟ್‌ನಲ್ಲಿ ವಿವರಗಳು ಪ್ರಕಟವಾಗಿವೆ. 2023ರ ಫೆಬ್ರವರಿ 15ರಿಂದ ಪರಿಷ್ಕೃತ ದರಗಳು ಜಾರಿಯಾಗಿವೆ. ( SBI FD Interest rate) 2 ಕೋಟಿ ರೂ.ಗಿಂತ ಒಳಗಿನ ಎಫ್‌ಡಿಗೆ ಇದು ಅನ್ವಯವಾಗುತ್ತದೆ. ಈ ಹಿಂದೆ 2022ರ ಡಿಸೆಂಬರ್‌ 13ರಂದು ಬ್ಯಾಂಕ್‌ ಬಡ್ಡಿ ದರಗಳನ್ನು ೦.೬೫% ತನಕ ಏರಿಸಿತ್ತು. ಎಸ್‌ಬಿಐ ಸಾಲದ ಬಡ್ಡಿ ದರದಲ್ಲಿ ಕೂಡ 0.10% ಹೆಚ್ಚಳವಾಗಿದೆ.

ಎಸ್‌ಬಿಐ ಎಫ್‌ಡಿ ಬಡ್ಡಿ ದರ ಏರಿಕೆ ಇಂತಿದೆ.

ಅವಧಿಸಾರ್ವಜನಿಕರಿಗೆ 2022 ಡಿ.13ರಿಂದಸಾರ್ವಜನಿಕರಿಗೆ 2022 ಫೆ.15 ರಿಂದಹಿರಿಯನಾಗರಿಕರಿಗೆ ಹಳೆಯ ದರಹಿರಿಯನಾಗರಿಕರಿಗೆ ಹೊಸ ದರ (ಫೆ.15 ರಿಂದ)
7ರಿಂದ 45 ದಿನ333.53.5
46ರಿಂದ 179 ದಿನ4.54.555
180ರಿಂದ 210 ದಿನ5.255.255.755.75
211ರಿಂದ 1 ವರ್ಷದೊಳಗೆ5.755.756.256.25
1ರಿಂದ 2 ವರ್ಷದೊಳಗೆ6.756.87.257.3
2ರಿಂದ 3 ವರ್ಷದೊಳಗೆ6.7577.257.5
3ರಿಂದ 5 ವರ್ಷದೊಳಗೆ6.256.56.757
5ರಿಂದ 10 ವರ್ಷ ತನಕ6.256.57.257.5

ಎಸ್‌ಬಿಐನಿಂದ 400 ದಿನಗಳ ಹೊಸ ಅವಧಿಯ ಠೇವಣಿ ಯೋಜನೆ: ಎಸ್‌ಬಿಐ 400 ದಿನಗಳ ವಿಶೇಷ ಠೇವಣಿ ಯೋಜನೆ ಬಿಡುಗಡೆಗೊಳಿಸಿದೆ. ಇದರ ಬಡ್ಡಿ ದರ 7.10%. ೨೦೨೩ರ ಮಾರ್ಚ್‌ 31 ತನಕ ಇದು ಸಿಗಲಿದೆ.

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ತನ್ನ ಮಾರ್ಜಿನಲ್‌ ಕಾಸ್ಟ್‌ ಆಫ್‌ ಫಂಡ್ಸ್‌ (MCLR) ಆಧರಿತ ಸಾಲದ ಬಡ್ಡಿ ದರಗಳಲ್ಲಿ 0.10% ಏರಿಸಿದೆ. ಇದರ ಪರಿಣಾಮ ಎಂಸಿಎಲ್‌ಆರ್‌ ಆಧರಿತ ಗೃಹಸಾಲ, ವಾಹನ ಸಾಲ, ವೈಯಕ್ತಿಕ ಸಾಲಗಳ ಬಡ್ಡಿ ದರಗಳು ಏರಿಕೆಯಾಗಿವೆ. ಆರ್‌ಬಿಐ ಇತ್ತೀಚೆಗೆ ರೆಪೊ ದರವನ್ನು 6.50%ಕ್ಕೆ ಏರಿಸಿದ ಬಳಿಕ ಎಸ್‌ಬಿಐ ದರ ಪರಿಷ್ಕರಿಸಿದೆ. ಆದರೆ ನಿಶ್ಚಿತ ಬಡ್ಡಿ ದರದ ಸಾಲಗಳ ಮೇಲೆ ಇದು ಪರಿಣಾಮ ಬೀರುವುದಿಲ್ಲ. ಫ್ಲೋಟಿಂಗ್‌ ದರಗಳ ಸಾಲಗಳಿಗೆ ಅನ್ವಯವಾಗುತ್ತದೆ. ಎಸ್‌ಬಿಐ ವೆಬ್‌ಸೈಟ್‌ ಪ್ರಕಾರ ಎಂಸಿಎಲ್‌ಆರ್‌ ದರವನ್ನು 7.85%ರಿಂದ 7.95% ಕ್ಕೆ ಏರಿಸಲಾಗಿದೆ. 2023ರ ಫೆಬ್ರವರಿ 15ರಿಂದ ಪರಿಷ್ಕೃತ ದರಗಳು ಜಾರಿಯಾಗಿವೆ.

Exit mobile version