Site icon Vistara News

SBI Rates: ಎಸ್‌ಬಿಐನಲ್ಲಿ ಎಫ್‌ಡಿ ಇಟ್ಟವರಿಗೆ ಬಂಪರ್‌ ನ್ಯೂಸ್;‌ ಭಾರಿ ಬಡ್ಡಿದರ ಹೆಚ್ಚಿಸಿದ ಬ್ಯಾಂಕ್!

SBI Rates

SBI fixed deposit (FD) interest rates hiked by up to 75 bps; Save More From FD

ಮುಂಬೈ: ದೇಶದ ಅಗ್ರ ಸಾರ್ವಜನಿಕ ವಲಯದ ಬ್ಯಾಂಕ್‌ (SBI) ಆಗಿರುವ ಎಸ್‌ಬಿಐ ತನ್ನ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ. ಸ್ಥಿರ ಠೇವಣಿದಾರರು ಬ್ಯಾಂಕ್‌ನಲ್ಲಿ ಇಟ್ಟಿರುವ ಮೊತ್ತದ ಮೇಲಿನ ಬಡ್ಡಿಯನ್ನು ಆಯಾ ಯೋಜನೆಗಳಿಗೆ ಅನ್ವಯವಾಗುವಂತೆ ಶೇ.0.25ರಿಂದ (25 ಮೂಲಾಂಕ) ಶೇ.0.75ರ (75 ಮೂಲಾಂಕ)ವರೆಗೆ ಬಡ್ಡಿದರವನ್ನು (SBI FD Interest Rates) ಏರಿಕೆ ಮಾಡಿದ್ದು, ಇದರಿಂದ ಸ್ಥಿರ ಠೇವಣಿದಾರರಿಗೆ ಭಾರಿ ಅನುಕೂಲವಾಗಲಿದೆ. ನೂತನ ಬಡ್ಡಿದರವು ಮೇ 15ರಿಂದಲೇ ಅನ್ವಯವಾಗಲಿದ್ದು, ಇದು ಗ್ರಾಹಕರ ಸಂತಸವನ್ನು ಹೆಚ್ಚಿಸಿದೆ.

7ರಿಂದ 45 ದಿನಗಳವರೆಗೆ 2 ಕೋಟಿ ರೂ. ಠೇವಣಿ ಇರಿಸಿದರೆ, ಅದರ ಮೇಲಿನ ಬಡ್ಡಿದರವನ್ನು ಬದಲಾವಣೆ ಮಾಡಿಲ್ಲ. ಆದರೆ, 46ರಿಂದ 179 ದಿನ ಠೇವಣಿ ಇಟ್ಟರೆ ಶೇ.4.75ರ ಬದಲು ಶೇ.5.50ರಷ್ಟು ಬಡ್ಡಿದರ ಸಿಗಲಿದೆ. ಹಿರಿಯ ನಾಗರಿಕರಿಗೆ ಶೇ.5.25ರ ಬದಲು ಶೇ.6ರಷ್ಟು ಬಡ್ಡಿ ಸಿಗಲಿದೆ. ಇನ್ನು ಒಂದರಿಂದ ಎರಡು ವರ್ಷದವರೆಗೆ ಸ್ಥಿರ ಠೇವಣಿ ಇರಿಸುವ ಸಾಮಾನ್ಯ (2 ಕೋಟಿ ರೂ.ಗಿಂತ ಕಡಿಮೆ ಮೊತ್ತ ಠೇವಣಿ ಇರಿಸುವವರು) ಠೇವಣಿದಾರರಿಗೆ ಶೇ.6.8ರಷ್ಟು ಹಾಗೂ ಹಿರಿಯ ನಾಗರಿಕರಿಗೆ ಶೇ.7.3ರಷ್ಟು ಬಡ್ಡಿ ಸಿಗಲಿದೆ.

ಹೀಗಿದೆ ನೂತನ ಬಡ್ಡಿದರ (2 ಕೋಟಿ ರೂ.ಗಿಂತ ಕಡಿಮೆ ಠೇವಣಿ ಮಾಡಿದವರಿಗೆ)

ಎಫ್‌ಡಿ ಅವಧಿನೂತನ ಬಡ್ಡಿದರಹಿರಿಯ ನಾಗರಿಕರಿಗೆ
180-210 ದಿನ6%6.50%
211 ದಿನದಿಂದ 1 ವರ್ಷ6.25%6.75%
1-2 ವರ್ಷ6.80%7.30%
2-3 ವರ್ಷ7%7%
3-5 ವರ್ಷ6.75%7.25%
5-10 ವರ್ಷ6.50%7.50%

ಎಫ್‌ಡಿ ಬಡ್ಡಿದರ ಏರಿಸಲು ಕಾರಣವೇನು?

ಕೊರೊನಾ ಬಿಕ್ಕಟ್ಟಿನ ನಂತರದಲ್ಲಿ ಆರ್ಥಿಕತೆಯು ಏಳಿಗೆಯತ್ತ ಸಾಗುತ್ತಿದೆ. ಇದರಿಂದ ಬ್ಯಾಂಕ್‌ಗಳಲ್ಲಿ ವಾಹಿವಾಟು ಜಾಸ್ತಿಯಾಗಿದೆ. ಭಾರತೀಯ ರಿಸರ್ವ್‌ ಬ್ಯಾಂಕ್‌ (RBI) ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಮುಂದಿನ ದಿನಗಳಲ್ಲೂ ರೆಪೋ ದರದಲ್ಲಿ ಯಾವುದೇ ಬದಲಾವಣೆಯಾಗುವ ಸಾಧ್ಯತೆ ಕಡಿಮೆ ಇದೆ. ಇದರಿಂದ ಗೃಹ ಸಾಲದ ಮೇಲೆ ಹೆಚ್ಚಿನ ಇಎಂಐ ಕಟ್ಟುವ ಹೊರೆಯು ಜನರಿಗೆ ಇರುವುದಿಲ್ಲ. ಹಾಗಾಗಿ, ಎಸ್‌ಬಿಐ ಸೇರಿ ಹಲವು ಬ್ಯಾಂಕ್‌ಗಳು ಜನರಿಂದ ಹೆಚ್ಚಿನ ಠೇವಣಿಯನ್ನು ಸೆಳೆಯಲು ಸ್ಥಿರ ಠೇವಣಿ ಮೇಲಿನ ಬಡ್ಡಿದರವನ್ನು ಏರಿಕೆ ಮಾಡುತ್ತಿವೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: RBI Monetary Policy: ಸಾಲಗಾರರಿಗೆ ಆರ್‌ಬಿಐ ಗುಡ್‌ ನ್ಯೂಸ್;‌ ರೆಪೋ ದರ ಯಥಾಸ್ಥಿತಿ

Exit mobile version