ನವ ದೆಹಲಿ: ದೇಶದ ಅತಿ ದೊಡ್ಡ ಬ್ಯಾಂಕ್ ಎಸ್‌ಬಿಐSBI Home loanತನ್ನ ಗೃಹಸಾಲದ ಬಡ್ಡಿ ದರದಲ್ಲಿ ೦.೨% ಏರಿಕೆ ಮಾಡಿದೆ. ಬ್ಯಾಂಕ್ ತನ್ನ ಸಾಲದ ವಿತರಣೆಗೆ ತಗಲುವ ವೆಚ್ಚವಾದ ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್-ಬೇಸ್ಡ್ ಲೆಂಡಿಂಗ್ ರೇಟ್ (MCLR) ಅನ್ನು ಆಗಸ್ಟ್ ೧೫ರಿಂದ ಅನ್ವಯವಾಗುವಂತೆ ಏರಿಸಿದೆ. ಅಂದರೆ ಎಂಸಿಎಲ್‌ಆರ್ ಆಧಾರಿತ ಸಾಲದ ಬಡ್ಡಿ ದರವನ್ನು ವೃದ್ಧಿಸಿದೆ.
ಗೃಹ ಸಾಲ, ವಾಹನ ಸಾಲ ಮತ್ತು ವೈಯಕ್ತಿಕ ಸಾಲಗಳು ಕೂಡ ಎಂಸಿಎಲ್‌ಆರ್ ಆಧಾರಿತ ಸಾಲದ ವ್ಯಾಪ್ತಿಯಲ್ಲಿ ಇರುವುದರಿಂದ ಅದರ ಬಡ್ಡಿ ದರ ಕೂಡ ವೃದ್ಧಿಸಲಿದೆ. ಆರ್‌ಬಿಐ ರೆಪೊ ದರವನ್ನು ಏರಿಸಿದ ಬಳಿಕ ಹಲವಾರು ಬ್ಯಾಂಕ್‌ಗಳು ಸಾಲದ ಬಡ್ಡಿ ದರವನ್ನು ಹೆಚ್ಚಿಸಿವೆ. ಇದರ ಪರಿಣಾಮ ಇಎಂಐ ಸಂಖ್ಯೆ ಹೆಚ್ಚಲಿದೆ.
ಎಸ್‌ಬಿಐನ ಮೂರು ತಿಂಗಳಿನ ಎಂಸಿಎಲ್‌ಆರ್ ದರ ೭.೧೫%ರಿಂದ ೭.೩೫%ಕ್ಕೆ ಏರಿಕೆಯಾಗಿದೆ. ೬ ತಿಂಗಳಿನ ಎಂಸಿಎಲ್‌ಆರ್ ದರ ೭.೪೫%ರಿಂದ ೭.೬೫%ಕ್ಕೆ ಏರಿಕೆಯಾಗಿದೆ. ಒಂದು ವರ್ಷದ ಎಂಸಿಎಲ್‌ಆರ್ ದರ ೭.೭%ಕ್ಕೆ ಹಾಗೂ ೨ ವರ್ಷದ ಎಂಸಿಎಲ್‌ಆರ್ ೭.೯% ಮತ್ತು ಮೂರು ವರ್ಷದ ಎಂಸಿಎಲ್‌ಆರ್ ೮%ಕ್ಕೆ ಏರಿಕೆಯಾಗಿದೆ.
ಆರ್‌ಬಿಐ ಹಣದುಬ್ಬರವನ್ನು ಹತ್ತಿಕ್ಕಲು ತನ್ನ ರೆಪೊ ದರದಲ್ಲಿ ಇತ್ತೀಚೆಗೆ ಶೇ.೦.೫೦% ಏರಿಸಿತ್ತು. ಒಟ್ಟಾರೆಯಾಗಿ ಕಳೆದ ಒಂದು ವರ್ಷದಿಂದ ರೆಪೊ ದರದಲ್ಲಿ ೧.೯% ಹೆಚ್ಚಳವಾಗಿದೆ. ರೆಪೊ ದರ ಏರಿಕೆಯಾದಾಗ ಬ್ಯಾಂಕ್‌ಗಳಿಗೆ ಆರ್‌ಬಿಐನಿಂದ ಫಂಡ್ ಪಡೆಯುವುದಕ್ಕೆ ತಗಲುವ ಖರ್ಚು ಹೆಚ್ಚುತ್ತದೆ. ಆಗ ಹೆಚ್ಚುವರಿ ವೆಚ್ಚವನ್ನು ಬ್ಯಾಂಕ್‌ಗಳು ಗ್ರಾಹಕರಿಗೆ ವರ್ಗಾಯಿಸುತ್ತವೆ. ಪರಿಣಾಮವಾಗಿ ಸಾಲದ ಬಡ್ಡಿ ದರಗಳು ಏರಿಕೆಯಾಗುತ್ತದೆ.