ನವ ದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸೋಮವಾರ ವ್ಯವಸ್ಥಿತ ಮಹತ್ವದ ಬ್ಯಾಂಕ್‌ಗಳ ಪಟ್ಟಿಯನ್ನು (Domestic Systemically Important Banks-D-SIBs) ಬಿಡುಗಡೆಗೊಳಿಸಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ ವ್ಯವಸ್ಥಿತ ಮಹತ್ವದ ಬ್ಯಾಂಕ್‌ಗಳು ಎಂದು ಆರ್‌ಬಿಐ ತಿಳಿಸಿದೆ. ಆರ್‌ಬಿಐ 2014ರ ಜುಲೈನಿಂದ ಈ ಕುರಿತ ಚೌಕಟ್ಟನ್ನು ಬಿಡುಗಡೆಗೊಳಿಸಿದೆ.
ಏನಿದರ ಮಹತ್ವ? ದೇಶೀಯವಾಗಿ ವ್ಯವಸ್ಥಿತ ಮತ್ತು ಮಹತ್ವದ ಬ್ಯಾಂಕ್‌ಗಳು ಅತಿ ದೊಡ್ಡ ಹಣಕಾಸು ಸಂಸ್ಥೆಗಳಾಗಿದ್ದು, ಅವುಗಳು ಪತನವಾಗಲು ಬಿಡಲಾಗುವುದಿಲ್ಲ. ಏಕೆಂದರೆ ಯಾವುದೇ ಮಹತ್ವದ ಬ್ಯಾಂಕ್ ಪತನವಾದರೆ, ಆರ್ಥಿಕ ವ್ಯವಸ್ಥೆಗೆ ಹಾನಿ ಸಂಭವಿಸುತ್ತದೆ. ಜನ ಭೀತರಾಗುತ್ತಾರೆ.